ಗ್ರಾಮಸಭೆ ನಡೆಸದೆ ಮನೆ ಹಂಚಿಕೆಗೆ ಯತ್ನ

maski thalekan
ಮೌನೇಶ ರಾಠೋಡ್
Published on

ಮಸ್ಕಿ: ತಲೇಖಾನ ಗ್ರಾಪಂನಲ್ಲಿ 2024-25ನೇ ಸಾಲಿಗೆ 260 ಮನೆಗಳು ಮಂಜೂರಾಗಿದ್ದು, ಗ್ರಾಮಸಭೆ ನಡೆಸದೆ ಪಿಡಿಒ ಹಾಗೂ ಅಧ್ಯಕ್ಷರ ಪುತ್ರ ಅವರಿಗೆ ಬೇಕಾದವರಿಗೆ ಹಣ ಪಡೆದು ಹಂಚಿಕೆ ಮಾಡಲು ಮುಂದಾಗಿದ್ದಾರೆ ಎಂದು ಗ್ರಾಪಂ ಸದಸ್ಯ ಮೌನೇಶ ರಾಠೋಡ್ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಪಂ ಮತ್ತು ತಾಪಂ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಈ ಕುರಿತು ಜಿಪಂ ಅಧಿಕಾರಿಗಳು, ತಾಪಂಗೆ ಪತ್ರ ಬರೆದು ನೋಡಲ್ ಅಧಿಕಾರಿ ಇಲ್ಲದೆ ಸರ್ಕಾರದ ನಿಯಮ ಪಾಲಿಸದೆ ಗ್ರಾಪಂ ಲಾಗಿನ್‌ನಲ್ಲಿ ಯಾವುದೆ ಮನೆಗಳನ್ನು ಎಂಟ್ರಿ ಮಾಡಬಾರದು ಎಂದು ಸೂಚಿಸಿದ್ದರು.

ಆದರೂ, ಎರಡು ದಿನಗಳ ಹಿಂದೆ ಪಿಡಿಒ ತಿಮ್ಮಣ್ಣ, ಕಾರ್ಯದರ್ಶಿ ಥಾಮಸ್, ಬಿಲ್ ಕಲೆಕ್ಟರ್ ಬಸವರಾಜ ಹಾಗೂ ಗ್ರಾಪಂ ಅಧ್ಯಕ್ಷರ ಮಗ ದೇವಪ್ಪ ಮುದಗಲ್‌ನಲ್ಲಿ ಖಾಸಗಿ ಕಂಪ್ಯೂಟರ್ ಸೆಂಟರ್‌ನಲ್ಲಿ ಗ್ರಾಪಂ ಲಾಗಿನ್ ಓಪನ್ ಮಾಡಿ ಬೇಕಾದವರ ಹೆಸರುಗಳನ್ನು ಸೇರ್ಪಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಜಿಪಂ ಸಿಒಗೆ ದೂರು ನೀಡಿದ್ದು, ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಶ್ರೀನಿವಾಸ, ವೆಂಕಟೇಶ, ಯಮನೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net