ರಟ್ಟಿಹಳ್ಳಿಯಲ್ಲಿ ಡಿಪೋ ನಿರ್ಮಿಸಲು ಯತ್ನ

15 RTL 01
Published on

ರಟ್ಟಿಹಳ್ಳಿ: ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಘಟಕ ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ. ಅದಕ್ಕಾಗಿ 5 ಎಕರೆ ಅವಶ್ಯಕತೆ ಇದ್ದು ಜಾಗ ಹುಡುಕಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಮತ್ತು ಬಸ್ ನಿಲ್ದಾಣಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಶಕ್ತಿ ಯೋಜನೆ ಜಾರಿಗೆ ಬಂದು 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸಾರಿಗೆ ಬಸ್‌ಗಳಿಗೆ ಪೂಜೆ ಸಲ್ಲಿಸಿ ಮಹಿಳಾ ಪ್ರಯಾಣಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಶಕ್ತಿ ಯೋಜನೆಯಡಿ ಹಿರೇಕೆರೂರು ಘಟಕದಿಂದ ಜೂ.2023 ರಿಂದ ಜುಲೈ 2025ರ ವರೆಗೆ ಒಟ್ಟು 22.76 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. 2 ವರ್ಷದಲ್ಲಿ ಕ್ಷೇತ್ರಕ್ಕೆ 14 ಹೊಸ ಬಸ್‌ಗಳನ್ನು ನೀಡಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಲವಾರು ಹೊಸ ಮಾರ್ಗಗಳಲ್ಲಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ಬಂದ್ ಆಗಲ್ಲ ಎಂದರು.

ವ್ಯವಸ್ಥಾಪಕ ಮಂಜುನಾಥ ಹಡಪದ, ಗ್ಯಾರಂಟಿ ಯೋಜನೆಯ ಅಧ್ಯಕ್ಷ ನಾರಾಯಣಪ್ಪ ಗೌರಕ್ಕನವರ, ಮಲ್ಲಿಕಾರ್ಜುನ ಬುರಡಿಕಟ್ಟಿ, ಪಿ.ಡಿ. ಬಸನಗೌಡ್ರ, ಹನುಮಂತಗೌಡ್ರು ಭರಮಣ್ಣನವರ, ರವೀಂದ್ರ ಮುದಿಯಪ್ಪನವರ, ಮಹೇಶಪ್ಪ ಗುಬ್ಬಿ, ಬೀರೇಶ ಕರಡಣ್ಣನವರ, ರಾಮಣ್ಣ ಗೌರಕ್ಕನವರ, ಪರಮೇಶಪ್ಪ ಕಟ್ಟೇಕಾರ, ವಿಜಯ ಅಂಗಡಿ, ಎಂ.ಪಿ.ಪ್ರಕಾಶ, ಕಾವ್ಯ ಹಿತ್ತಲಮನಿ, ಮಂಜಣ್ಣ ಅಸ್ವಾಲಿ, ಸರ್ಪರಾಜ ಮಾಸೂರು, ನಾಶೀರಖಾನ ಬಡಗಿ, ಕಿರಣ ವಾಲ್ಮೀಕಿ, ನಿಜಲಿಂಗಪ್ಪ ಮರಿಬಸಪ್ಪನವರ, ರೇವಣಪ್ಪ ದಿಬ್ಬದಹಳ್ಳಿ, ಮಂಜಣ್ಣ ಮಾಸೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net