ಯತ್ನಾಳ ಉಚ್ಚಾಟನೆ ಮರುಪರಿಶೀಲನೆಗೆ ಆಗ್ರಹ

5MDLG1
Published on

ಮೂಡಲಗಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಚಾಟನೆ ಮರು ಪರಿಶೀಲಿಸಿಬೇಕೆಂದು ಆಗ್ರಹಿಸಿ ತಾಲೂಕು ಹಿಂದುಪರ ಸಂಟನೆಗಳು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದವು.

ಮುಖಂಡ ನಿಂಗಪ್ಪ ಫಿರೋಜಿ ಮಾತನಾಡಿ, ಶಾಸಕ ಯತ್ನಾಳ ಪ ವಿರೋಧಿ ಚಟುವಟಿಕೆ, ಹೇಳಿಕೆ ನೀಡುವುದನ್ನು ಮಾಡಿಲ್ಲ. ಅವರನ್ನು ಉಚ್ಚಾಟನೆ ಮಾಡಿರುವುದು ಬಿಜೆಪಿ ಕಾರ್ಯಕರ್ತರಿಗೆ ನೋವಾಗಿದೆ. ಕೂಡಲೇ ವರಿಷ್ಠರು ಉಚ್ಚಾಟನೆ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಉತ್ತರ ಕರ್ನಾಟಕದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ಯತ್ನಾಳ ವಿರುದ್ಧ ಕುತಂತ್ರ ಮಾಡಿರುವ ವ್ಯಕ್ತಿಗಳು ಸುಟಕೇಸ್​ ರಾಜಕೀಯ ಮಾಡುತ್ತಿದ್ದಾರೆ. ಆದರೆ, ಶಾಸಕ ಯತ್ನಾಳ ಅವರಿಗೆ ಹಿಂದುಗಳು ಸೇರಿ 100 ಕೋಟಿ ರೂ.ಹಣ ನೀಡಿ ಬೆಂಬಲ ನೀಡುವಂತ ಹೃದಯವಂತಿಗೆ ಇದೆ ಎಂದು ತಿಳಿಸಿದರು.

ಶಿವಬಸು ಹಂದಿಗುಂದ, ಬಸವರಾಜ ಕಾಪಸಿ, ಬಸಲಿಂಗ ನಿಂಗನೂರ, ರವಿ ಮಹಾಲಿಂಗಪುರ ಮಾತನಾಡಿದರು. ಸಂಗಮೇಶ ಕೌಜಲಗಿ, ಸುಭಾಷ ಢವಳೇಶ್ವರ, ಪ್ರಶಾಂತ ನಿಡಗುಂದಿ, ಈರಪ್ಪ ಬನ್ನೂರ, ಮೌನೇಶ ಪತ್ತಾರ, ಕೃಷ್ಣ ನಾಸಿ, ಶಿವಲಿಂಗಪ್ಪ ಗೋಕಾಕ, ಸಿ.ಎನ್​.ಮುಗಳಖೋಡ, ರಾಮಣ್ಣ ಹಂದಿಗುಂದ, ಜಯಾನಂದ ಪಾಟೀಲ, ಕೆ.ಎಚ್​.ನಾಗರಾಳ, ಶಿವನಗೌಡ ಪಾಟೀಲ, ಬಸವರಾಜ ರಂಗಾಪುರ, ಈರಪ್ಪ ಢವಳೇಶ್ವರ, ಶಂಕರ ಗೌಡಿಗೌಡರ, ಚನ್ನಪ್ಪ ಪಾಟೀಲ, ಚೇತನ್​ ನಿಶಾನಿಮಠ, ಶೀತಲ್​ ಬೇವಿನಕಟ್ಟಿ, ಅಜ್ಜಪ್ಪ ಕಂಕಣವಾಡಿ, ಈರಣ್ಣ ಅಂಬಿ, ಶೇಖರ ತೆಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net