ನಾಯಿಗೆ ಚಿಕಿತ್ಸೆ ನೀಡದ ವೈದ್ಯರ ಮೇಲೆ ಹಲ್ಲೆ

Dog
Published on

ಬೆಂಗಳೂರು: ಗಾಯಗೊಂಡ ನಾಯಿಯನ್ನು ಮನುಷ್ಯರ ಕ್ಲಿನಿಕ್​ಗೆ ತಂದು ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಬೆದರಿಸಿ ಹಲ್ಲೆ ನಡೆಸಿದ ರೌಡಿಯನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

ಆಸ್ಟಿನ್​ಟೌನ್ ಲೇಔಟ್​ನ ನಿವಾಸಿ ಡಾ. ಎ.ಎಚ್. ಶೆಟ್ಟಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರದೀಪ್ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಡಾ. ಎ.ಎಚ್. ಶೆಟ್ಟಿ ನೀಲಸಂದ್ರದಲ್ಲಿ ಕ್ಲಿನಿಕ್ ಹೊಂದಿದ್ದು, ಫೆ.8ರ ರಾತ್ರಿ 10.20ರಲ್ಲಿ ಕ್ಲಿನಿಕ್​ನಲ್ಲಿದ್ದಾಗ ಗಾಯಗೊಂಡ ನಾಯಿಯೊಂದನ್ನು ಪ್ರದೀಪ್ ಕ್ಲಿನಿಕ್​ಗೆ ತಂದು ಚಿಕಿತ್ಸೆ ಕೊಡಿಸುವಂತೆ ಕೇಳಿಕೊಂಡಿದ್ದ. ನಾನು ಪ್ರಾಣಿಗಳಿಗೆ ಚಿಕಿತ್ಸೆ ಕೊಡುವ ವೈದ್ಯನಲ್ಲ.

ಪಶುವೈದ್ಯ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಿ ಎಂದು ವೈದ್ಯರು ಹೇಳಿದ್ದಾರೆ. ಆಕ್ರೋಶಗೊಂಡ ರೌಡಿ ಅವಾಚ್ಯ ಶಬ್ದಗಳಿಂದ ವೈದ್ಯರಿಗೆ ನಿಂದಿಸಿ ಹಲ್ಲೆ ನಡೆಸಿದ್ದ. ಪಕ್ಕದಲ್ಲಿದ್ದ ವೈದ್ಯರ ಸಹೋದರ ಸಹಾಯಕ್ಕೆ ಬಂದಾಗ ಪ್ರದೀಪ್ ಚೂರಿಯಿಂದ ಹಲ್ಲೆ ಮಾಡಲು ಮುಂದಾಗಿದ್ದ. ವೈದ್ಯರು ಪೊಲೀಸರಿಗೆ ಕರೆ ಮಾಡಿದಾಗ ಸ್ಥಳದಿಂದ ಪರಾರಿಯಾಗಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net