ಅಟಲ್ ಭೂಜಲ ಚಿಕ್ಕನಾಯಕನಹಳ್ಳಿಗೆ ವರದಾನ?

IMG_20200601_103025
Published on

ಚಿಕ್ಕನಾಯಕನಹಳ್ಳಿ: ಅಂತರ್ಜಲ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಟಲ್ ಭೂಜಲ ಯೋಜನೆಯಲ್ಲಿ ತಾಲೂಕು ಪೈಲಟ್ ಕ್ಷೇತ್ರವಾಗಿ ಆಯ್ಕೆಯಾಗಿದ್ದು, ಯೋಜನೆಯು ಸಮರ್ಪಕವಾಗಿ ಅನುಷ್ಠಾನಗೊಂಡರೆ ಬರಪೀಡಿತ ತಾಲೂಕಿಗೆ ವರದಾನವಾಗಲಿದೆ.

ತಾಲೂಕು ಕೇಂದ್ರ ಶುಷ್ಕ ಕೃಷಿ ಹವಾವಾನ ವಲಯದಲ್ಲಿದ್ದು, ಇಲ್ಲಿನ ವಾರ್ಷಿಕ ಸರಾಸರಿ ಮಳೆಯ ಪ್ರವಾಣ 757 ಮಿ.ಮೀ ಇದೆ. ಸರಾಸರಿ ಉಷ್ಣಾಂಶ 24.5 ಡಿಗ್ರಿ ಸೆ., ವಿಸ್ತೀರ್ಣ 1,113 ಚದರ ಕಿ.ಮೀ ಹೊಂದಿದೆ. ಇದರಲ್ಲಿ 8,235 ಹೆಕ್ಟೇರ್ ಅರಣ್ಯ ಪ್ರದೇಶವಿದ್ದು, ಮಳೆ ಆಶ್ರಿತ ಕೃಷಿ ಭೂಮಿ 75,894.6 ಹೆಕ್ಟೇರ್, ನೀರಾವರಿ ಆಶ್ರಿತ ಭೂಮಿ 2034.55 ಹೆಕ್ಟೇರ್ ಆಗಿದೆ. ಇಲ್ಲಿನ ನೀರಾವರಿಯ ಮೂಲ ಆಕರಗಳು ಕೆರೆ ಅಥವಾ ಕೊಳವೆ ಬಾವಿಗಳಾಗಿವೆ.

ಸರ್ಕಾರ ಅಂತರ್ಜಲ ಸಂರಕ್ಷಣೆ, ಮರುಪೂರಣಕ್ಕಾಗಿ ಚೆಕ್‌ಡ್ಯಾಂ ನಿರ್ಮಾಣ, ಕೆರೆ ಹೂಳೆತ್ತುವುದು, ಇಂಗು ಗುಂಡಿಗಳ ನಿರ್ಮಾಣ, ಕೃಷಿ ಹೊಡಗಳ ನಿರ್ಮಾಣ, ಮಳೆ ನೀರು ಕೊಯ್ಲು ವಿಧಾನಗಳನ್ನು ಅಳವಡಿಕೆಗೆ ಪ್ರೋತ್ಸಾಹ ನೀಡುತ್ತಿದ್ದು, ಯೋಜನೆ ಯಾವ ರೀತಿ ತಾಲೂಕಿಗೆ ವರದಾನವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕುಸಿಯುತ್ತಿದೆ ಅಂತರ್ಜಲಮಟ್ಟ: 152 ಕೆರೆಗಳು ತಾಲೂಕಿನಲ್ಲಿದ್ದು, ಮೂರು ಪ್ರಮುಖ ನದಿ ನಾಲೆಗಳಿವೆ. 20 ವರ್ಷಗಳಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧ್ಯಯನದಲ್ಲಿ ಅಂತರ್ಜಲ ನಿರಂತರ ಇಳಿಕೆ ಕಾಣುತ್ತಿದೆ. ಒಟ್ಟು ಅಂತರ್ಜಲ ಲಭ್ಯತೆಯ ಪ್ರವಾಣ 2009ರಲ್ಲಿ 7,398 ಹೆಕ್ಟೋ ಮೀಟರ್, 2011ರಲ್ಲಿ 7396.38 ಹೆಕ್ಟೋ ಮೀಟರ್, 2013ರಲ್ಲಿ 7456.52 ಹೆಕ್ಟೋ ಮೀಟರ್, 2017ರಲ್ಲಿ 5940.47 ಹೆಕ್ಟೋ ಮೀಟರ್‌ನಂತೆ ವರ್ಷದಿಂದ ವರ್ಷಕ್ಕೆ ಅಂತರ್ಜಲ ಕುಸಿಯುತ್ತ ಬಂದಿದೆ.

ಅಟಲ್ ಭೂಜಲ ಯೋಜನೆಯ ಉದ್ದೇಶವೇ ಅಂತರ್ಜಲಮಟ್ಟ ಹೆಚ್ಚಿಸುವುದಾಗಿದೆ. ಈ ಬಗ್ಗೆ ರಾಜ್ಯದಲ್ಲಿ ಕ್ರಮಕೈಗೊಂಡಿದ್ದು ಪೈಲಟ್ ಕ್ಷೇತ್ರವಾಗಿ ತಾಲೂಕನ್ನು ಆಯ್ಕೆ ವಾಡಲಾಗಿದ್ದು, ಈ ಯೋಜನೆ ಯಶಸ್ವಿಗೊಳಿಸಲು ಅಧಿಕಾರಿಗಳ ಸಭೆ ನಡೆಸಲಾಗಿದೆ. ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆ ನಡೆಸಲಾಗುತ್ತದೆ. ಜೆ.ಸಿ.ವಾಧುಸ್ವಾಮಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net