

ಅರಟಾಳ: ಶ್ರಾವಣ ಮಾಸದಲ್ಲಿ ದೇವರ ಧ್ಯಾನ, ಉಪಾಸನೆ ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎಂದು ಝಂಜರವಾಡದ ಸಿದ್ಧಾರೂಢ ಹಿರೇಮಠ ಸ್ವಾಮೀಜಿ ಹೇಳಿದರು.
ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಕುಂಭಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೀವನದಲ್ಲಿ ಸಂಪತ್ತು ಎಂದರೆ ಬರೀ ಹಣ, ಐಶ್ವರ್ಯವಲ್ಲ. ಎಲ್ಲರನ್ನೂ ಗೌರವಿಸುವ ವಾತಾವರಣ ಸೃಷ್ಟಿಸುವುದೇ ನಿಜ ಸಂಪತ್ತು. ಇರುವ ಅಲ್ಪಕಾಲದಲ್ಲಿ ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯ ಕಾಪಾಡಿಕೊಂಡು ಹೋಗಬೇಕು ಎಂದರು. ಸಕಲ ವಾದ್ಯಮೇಳದೊಂದಿಗೆ ಪಲ್ಲಕ್ಕಿಉತ್ಸವ ಮತ್ತು ಕುಂಭಮೇಳ ಜರುಗಿತು. ಅನ್ನಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಅರ್ಚಕ ಬಸವರಾಜ ಭಂಡಾರಿ, ದುಂಡನಗೌಡ ಪಾಟೀಲ, ರಾಮಪ್ಪ ಭಂಡಾರಿ, ಲಕ್ಷ್ಮಣ ಹಿರೇಕುರಬರ, ಕಲ್ಲಪ್ಪ ಪಾಟೀಲ, ಅಪ್ಪಸಾಬ ಪಾಟೀಲ, ಶಿವಾನಂದ ಭಂಡಾರಿ, ಸಿದ್ದಪ್ಪ ಹಿರೇಕುರಬರ, ಮಲ್ಲಿಕಾರ್ಜುನ ಪಾಟೀಲ, ಮುತ್ತಪ್ಪ ಭಂಡಾರಿ, ಶಂಕರ ಮಾಳಿ ಇತರರಿದ್ದರು.