

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಪ್ರೀತಿ ಇದ್ದಲ್ಲಿ ಸಹಬಾಳ್ವೆ ನೆಲೆಯಾಗುತ್ತದೆ. ಜತೆಗೆ ಪರಿಶುದ್ಧ ಅಂತರಂಗದೊಂದಿಗೆ ದೇವರನ್ನು ಭಜಿಸಿದರೆ ದೇವತಾ ಅನುಗ್ರಹವೂ ಪ್ರಾಪ್ತಿಯಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ಸಾಧ್ವಿ ಶ್ರೀ ಮಾತಾನಂದಮಯಿ ಹೇಳಿದರು.
ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್, ಅಯ್ಯಪ್ಪ ಸ್ವಾಮಿ ಸೇವಾ ಭಜನಾ ಮಂಡಳಿ, ಪರಂಜ್ಯೋತಿ ಮಾತೃ ಮಂಡಳಿ ಹಾಗೂ ಸಂಧ್ಯಾ ಭಜನೋತ್ಸವ ಸಮಿತಿ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥ ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ 48 ದಿನ ನಡೆಯಲಿರುವ ಸಂಧ್ಯಾ ಭಜನಾ ಸಂಕೀರ್ತನೆಗೆ ಸೋಮವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಶ್ರೀ ಅಯ್ಯಪ್ಪ ಸ್ವಾಮಿ ಸಂಧ್ಯಾ ಭಜನಾ ಸಮಿತಿ ಅಧ್ಯಕ್ಷ ವಿಶ್ವನಾಥ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಸೀತಾರಾಮ ಶೆಟ್ಟಿ ನೆತ್ತಿಲಬಾಳಿಕೆ, ಮುಖಂಡರಾದ ಪ್ರವೀಣ್ ಅಮೀನ್ ಅಸೈಗೋಳಿ ಸೈಟ್, ಸುರೇಶ್ ಅಸೈ, ಮಂಜುನಾಥ ಆಳ್ವ ತೇವುನಾಡು ಗುತ್ತು, ಸುರೇಶ್ ರೈ ಕಕ್ಕೆಮಜಲು, ಟ್ರಸ್ಟಿಗಳಾದ ರಮೇಶ್ ರೈ ಕೆಳಗಿನಮನೆ, ಚಂದ್ರಶೇಖರ್ ಶೆಟ್ಟಿ ಮಂಟಮೆ, ಟ್ರಸ್ಟಿ ಸುಧಾಕರ ನಾಯಕ್, ಪರಂಜ್ಯೋತಿ ಮಾತೃ ಮಂಡಳಿ ಅಧ್ಯಕ್ಷೆ ನಾಗವೇಣಿ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಕೋಶಾಧಿಕಾರಿ ಆನಂದ ಅಸೈಗೋಳಿ ಸ್ವಾಗತಿಸಿದರು. ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಪುಲ್ಲು ಪ್ರಸ್ತಾ ವನೆಗೈದರು. ಸಂಧ್ಯಾ ಭಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಪಟ್ಟೋರಿ ವಂದಿಸಿದರು. ಸಂಘಟನಾ ಕಾರ್ಯದರ್ಶಿ ತ್ಯಾಗಂ ಹರೇಕಳ ನಿರೂಪಿಸಿದರು.
ದೇವಾಲಯದಲ್ಲಿ ನಿರಂತರ ಭಜನೆ, ಭಗವಂತನ ನಾಮ ಸಂಕೀರ್ತನೆ ಮಾಡಿದರೆ ಸಾನ್ನಿಧ್ಯ ಬೆಳಗುತ್ತದೆ. ಅಸೈಗೋಳಿಯ ಅಯ್ಯಪ್ಪನ ಕ್ಷೇತ್ರದಲ್ಲಿ 48 ದಿನಗಳ ಸಂಧ್ಯಾ ಭಜನೆಯಲ್ಲಿ ಪಾಲ್ಗೊಂಡು ಪುಣ್ಯ ಸಂಪಾದಿಸಲು ಪ್ರಯತ್ನಿಸಬೇಕು. - ರವಿ ರೈ ಪಜೀರು, ಅಧ್ಯಕ್ಷರು, ಗುಳಿಗ ಕೊರಗಜ್ಜ ಜೀರ್ಣೋದ್ಧಾರ ಸಮಿತಿ https://www.vijayavani.net/a-good-opportunity-is-given-to-sportspersons https://www.vijayavani.net/theft-from-a-tire-workshop