ಮುಳಬಾಗಿಲು: ತಾಲೂಕಿನ ನಾಗಲಕುಂಟೆ ಬಳಿ ಶನಿವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಮೂವರು ಮುಸುಕುಧಾರಿಗಳು ಅಂಗಡಿ ಮಾಲೀಕನನ್ನು ಅಡ್ಡಗಟ್ಟಿ ತೀವ್ರ ಹಲ್ಲೆ ಮಾಡಿದ್ದಾರೆ. ಯಡಹಳ್ಳಿಯ ನಿವಾಸಿ ಜಿ.ಬಾಬುಲಚಾರಿ (56) ಹಲ್ಲೆಗೆ ಒಳಗಾದವರು. ಬಾಬುಲಚಾರಿ ಪಕ್ಕದ ಗುಮ್ಮಕಲ್ ಗ್ರಾಮದಲ್ಲಿ ಟೀ ಅಂಗಡಿ ನಡೆಸುತ್ತಿದು,್ದ ಅಂಗಡಿ ತೆರೆಯಲು ಯಡಹಳ್ಳಿ ಯಿಂದ ಗುಮ್ಮಕಲ್ಗೆ ಹೋಗುತ್ತಿದ್ದಾಗ ನಾಗಲಕುಂಟೆ ಬಳಿ ಮೂವರು ಮುಸುಕುದಾರಿಗಳು ಹೊಂಚು ಹಾಕಿ ಮಚ್ಚು ಮತ್ತು ದೊಣ್ಣೆಗಳಿಂದ ತೀವ್ರ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಗಾಯಾಳು ಜಿ.ಬಾಬುಲಚಾರಿ ಅವರನ್ನು ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮದ ಶ್ರೀನಾಥ್, ರವಿ, ತಮ್ಮೇಗೌಡ, ಗುಮ್ಮ ಕಲ್ ಗ್ರಾಮದ ಈಶ್ವರ ಆಚಾರಿ ಅವರ ಮೇಲೆ ಅನುಮಾನವಿದೆ ಎಂದು ದೂರು ನೀಡಿದ್ದು, ಈ ಪ್ರಕರಣದ ಬಗ್ಗೆ ನಂಗಲಿ ಪಿಎಸ್ಐ ಅರ್ಜುನ್ಗೌಡ ತನಿಖೆ ಕೈಗೊಂಡಿದ್ದಾರೆ.