ತವಾದಿಂದ ಹಲ್ಲೆ ಮಾಡಿ ಸ್ಕೂಟರ್ ಅಪಹರಣ

knife attack
Published on

ಮಂಗಳೂರು: ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ದೋಸೆ ತವಾ ಹಿಡಿದು ಅಡ್ಡಗಟ್ಟಿ ಹೆಲ್ಮೆಟ್ ಮೇಲೆ ಹಲ್ಲೆ ನಡೆಸಿ, ಜತೆಗಿದ್ದ ಪುತ್ರಿಯನ್ನು ದೂಡಿ ಹಾಕಿ ಸ್ಕೂಟರನ್ನು ಅಪಹರಿಸಿದ್ದಾನೆ.

ಪೆಡ್ಡಿ ಡಾಯಸ್ ಅವರು ತನ್ನ ಪುತ್ರಿಯೊಂದಿಗೆ ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿ ಹಿಂದಿರುಗುವ ವೇಳೆ ಬನ್ನಡ್ಕ ಎಂಬಲ್ಲಿ ಅಪರಿಚಿತ ವ್ಯಕ್ತಿ ತವಾ ಹಿಡಿದು ಸ್ಕೂಟರ್ ಅಡ್ಡಗಟ್ಟಿ ಹಲ್ಲೆ ನಡೆಸಿ, ಅವರ ಸ್ಕೂಟರ್ ಸುಲಿಗೆ ಮಾಡಿ ಚಲಾಯಿಸಿಕೊಂಡು ಕಾರ್ಕಳದ ಕಡೆಗೆ ಹೋಗಿದ್ದಾನೆ.

ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net