ಸ್ಟೀಲ್ ಚಮಚದಿಂದ ಹಲ್ಲೆ

crime
Published on

ಹುಬ್ಬಳ್ಳಿ: ಎದರುತ್ತರ ಕೊಡುತ್ತಿಯಾ ಎಂದು ಮೂರ‌್ನಾಲ್ಕು ಜನ ಸೇರಿ ಒಬ್ಬನ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಚಮಚದಿಂದ ತಲೆ ಮತ್ತು ಕುತ್ತಿಗಿಗೆ ಹೊಡೆದಿರುವ ಘಟನೆ ಇಲ್ಲಿಯ ದುರ್ಗದಬೈಲ್‌ನಲ್ಲಿ ನಡೆದಿದೆ.
ಶಿವಾನಂದ ಭಜಂತ್ರಿ ಗಾಯಗೊಂಡವರು. ರೋಹಿತ್, ಮಲ್ಲು ಸೇರಿದಂತೆ ನಾಲ್ವರು ಹಲ್ಲೆ ಮಾಡಿದ್ದಾರೆ.
ಇಡ್ಲಿವಡಾ ಅಂಗಡಿಯಲ್ಲಿ ಕೆಲಸ ಮಾಡುವ ಶಿವಾನಂದಗೆ ಗೋಬಿ, ಅಂಗಡಿ ಹತ್ತಿರ ನಿಂತಾಗ ಆರೋಪಿತರು ಡಿಕ್ಕಿ ಹೊಡೆದು, ನನಗೆ ಎದುರು ಮಾತನಾಡುತ್ತೀಯಾ? ಎಂದು ಇಟ್ಟಿಗೆ ತುಂಡುಗಳಿಂದ ಹೊಡೆದಿದ್ದಾರೆ. ತಪ್ಪಿಸಿಕೊಂಡು ಓಡಿಹೋದರೂ ಬಿಡದೆ ಬೆನ್ನಟ್ಟಿ ಫಾಸ್ಟ್ ಫುಡ್ ಅಂಗಡಿಯಲ್ಲಿದ್ದ ಸ್ಟೀಲ್ ಚಮಚ ತೆಗೆದುಕೊಂಡು ತಲೆ ಮತ್ತು ಕುತ್ತಿಗಿಗೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net