ಸಂವಿಧಾನದ ಮೇಲೆ ನಡೆದ ದಾಳಿ

14 KUDLGI 01
ಸುಪ್ರೀಂಕೋರ್ಟ್ ಸಿಜೆಐ ಮೇಲೆ ಶೂ ಎಸೆಯುವ ಯತ್ನ ಖಂಡಿಸಿ ಕೂಡ್ಲಿಗಿಯಲ್ಲಿ ವಕೀಲರ ಸಂಘದಿಂದ ಶಿರಸ್ತೇದಾರ್ ಎಸ್. ಚಂದ್ರಶೇಖರ್‌ಗೆ ಮನವಿ ಸಲ್ಲಿಸಲಾಯಿತು. ತಾಲೂಕು ವಕೀಲರ ಸಂಘದ ಪದಾಧಿಕಾರಿಗಳಾದ ಸಿ.ವಿರೂಪಾಕ್ಷಪ್ಪ, ಡಿ.ಎಚ್.ದುರುಗೇಶ್, ರಾಮಪ್ಪ, ಕೆ.ಬಿ.ಸಾವಿತ್ರಿ ಬಾಯಿ, ಎಲ್.ಎಸ್.ಬಷೀರ್ ಆಹಮ್ಮದ್, ಮಲ್ಲಿಕಾರ್ಜುನ, ಲಕ್ಷ್ಮೀದೇವಿ ಇತರರಿದ್ದರು.
Published on

ಕೂಡ್ಲಿಗಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಮಂಗಳವಾರ ಶಿರಸ್ತೇದಾರ್ ಎಸ್.ಚಂದ್ರಶೇಖರ್‌ಗೆ ಮನವಿ ಸಲ್ಲಿಸಿದರು.

ವಕೀಲರ ಸಂಘದ ತಾಲೂಕು ಅಧ್ಯಕ್ಷ ಜಿ.ಹೊನ್ನೂರಪ್ಪ ಮಾತನಾಡಿ, ಕಾನೂನನ್ನು ಗೌರವಿಸುವ ವಕೀಲರೇ ಇಂಥ ತಪ್ಪು ಮಾಡಿರುವುದು ಎಲ್ಲರೂ ತಲೆ ತಗ್ಗಿಸುವ ಕಾರ್ಯವಾಗಿದೆ. ಇದನ್ನು ತಾಲೂಕು ವಕೀಲರ ಸಂಘ ಒಕ್ಕೊರಲಿನಿಂದ ಖಂಡಿಸುತ್ತದೆ. ಈ ಘಟನೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನೆಡೆದ ದಾಳಿಯಾಗಿದೆ.

ಸಂವಿಧಾನ ಓದಿದ ಮತ್ತು ಪ್ರಜಾಸತ್ತತೆಯನ್ನು ಎತ್ತಿಹಿಡಿಯಬೇಕಾದ ಹಿರಿಯ ವಕೀಲರೊಬ್ಬರು ಈ ರೀತಿ ನೆಡೆದುಕೊಂಡಿರುವುದನ್ನು ಸಹಿಸಲಾಗುವುದಿಲ್ಲ. ಎಲ್ಲ ಅರಿವಿದ್ದು ನಡೆಸಿದ ಇಂತಹ ಕೃತ್ಯಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥನನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ವಕೀಲರಾದ ವೀರೇಂದ್ರ ಪಾಟೀಲ್, ರಮೇಶ್, ಹೋ.ಮ.ಪಂಡಿತಾರಾಧ್ಯ, ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net