ಮಾರಕಾಸ್ತ್ರಗಳಿಂದ ಯುವಕರ ಮೇಲೆ ದಾಳಿ

man thrashed
Published on

ಬಂಟ್ವಾಳ: ಪೂರ್ವದ್ವೇಷದ ಹಿನ್ನೆಲೆಯಲ್ಲಿ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಪರಿಣಾಮ ಇಬ್ಬರು ಯುವಕರು ಗಂಭೀರ ಗಾಯಗೊಂಡ ಘಟನೆ ಪುದು ಗ್ರಾಮದ ಅಮ್ಮೆಮಾರ್ ಎಂಬಲ್ಲಿ ನಡೆದಿದೆ.

ತಸ್ಲೀಮ್, ಮಹಮ್ಮದ್ ಶಾಕೀರ್ ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯ ನಿವಾಸಿಗಳಾದ ಮನ್ಸೂರ್, ಇಮ್ರಾನ್, ಮುಸ್ತಾಕ ಯಾನೆ ಮಿಚ್ಚ, ಸರ್ಪುದ್ದೀನ್, ಅಶ್ರಫ್, ರಿಜ್ವಾನ್, ಸಫ್ವಾನ್, ಅದ್ನಾನ್, ನಿಸಾಕ್, ಯಾಸೀರ್, ಸುಹೈಲ್, ಜಾಹೀದ್, ಸಾದಿಕ್, ಲತೀಫ್ ಎಂಬುವರು ಆರೋಪಿಗಳಾಗಿದ್ದಾರೆ.

ಅಮ್ಮೆಮಾರ್ ನಿವಾಸಿ ತಸ್ಲೀಮ್, ಮಹಮ್ಮದ್ ಶಾಕೀರ್, ನಾಸೀರ್, ಸಿಯಾಬು, ಸೈಫುದ್ದೀನ್ ಮಾತನಾಡುತ್ತಿದ್ದ ವೇಳೆ ತಸ್ಲೀಮ್‌ನನ್ನು ಕರೆಯೊಂದು ಬಂದಿದ್ದು, ಈ ವೇಳೆ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ನಾಲ್ಕು ಮಾರ್ಗಕ್ಕೆ ಬರುವಂತೆ ಸವಾಲು ಹಾಕಿದ್ದಾನೆ. ಅವರು ಅಮ್ಮೆಮಾರ್ ಶಾಲಾ ಬಳಿಗೆ ಹೋದಾಗ ಆರೋಪಿ ಮನ್ಸೂರ್, ಇತರರು ಇದ್ದು ಇಮ್ರಾನ್ ತಲವಾರಿನಿಂದ ತಸ್ಲೀಮ್‌ನ ಬಲಕಾಲು, ಮತ್ತೋರ್ವ ಆರೋಪಿ ಮುಸ್ತಾಕನು ಬಲಗೈಗೆ ಕಡಿದಿದ್ದು, ಸರ್ಫುದ್ದೀನ್ ಕಲ್ಲಿನಿಂದ ಹೊಡೆದಿರುತ್ತಾನೆ. ತಸ್ಲೀಮ್ ನೆಲಕ್ಕೆ ಬಿದ್ದಾಗ, ಮನ್ಸೂರ್ ಮುಖಕ್ಕೆ ಕಡಿದಿರುತ್ತಾನೆ. ಜತೆಗೆ ಆರೋಪಿಗಳು ಮಹಮ್ಮದ್ ಶಾಕೀರ್‌ಗೂ ಅದೇ ರೀತಿ ತಲವಾರಿನಿಂದ ಕಡಿದಿರುತ್ತಾರೆ. ಅಶ್ರಫ್, ರಿಜ್ವಾನ್, ಲತೀಫ್ ಮರದ ದೊಣ್ಣೆಯಿಂದ ಹೊಡೆದಿರುತ್ತಾರೆ. ಘಟನೆಯ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net