ಪಾಕಿಸ್ತಾನ‌ ಜಿಂದಾಬಾದ್ ಎಂದ ವ್ಯಕ್ತಿಗೆ ಬಿತ್ತು ಧರ್ಮದೇಟು!

Screenshot_2024-06-12-13-36-45-32.jpg
Published on

ಬೆಳಗಾವಿ: ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲೇ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ ಕೂಗಿದ ಘಟನೆ ಬುಧವಾರ ನಡೆದಿದೆ.

ನಟೋರಿಯಸ್‌ ಪಾತಕಿ ಪುತ್ತೂರು ಮೂಲದ ಜಯೇಶ್‌ ಪೂಜಾರಿ ಘೋಷಣೆ ಕೂಗಿದ ವ್ಯಕ್ತಿ. ಕೋರ್ಟ್ ಒಳಗೆ ಘೋಷಣೆ ಕೂಗುತ್ತಿದ್ದಂತೆ ವಕೀಲರು, ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.

ಆಕ್ರೋಶಗೊಂಡು ಥಳಿಸುತ್ತಿದ್ದಂತೆ ಪೊಲೀಸರು ಆರೋಪಿಯನ್ನು ರಕ್ಷಣೆ ಮಾಡಿ ಹೊರ ಕರೆದುಕೊಂಡು ಬಂದು, ಎಪಿಎಂಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಗೆ ಜೀವ ಬೆದರಿಕೆ ಹಾಕಿದ್ದ ಕೇಸ್ ವಿಚಾರಣೆಗಾಗಿ ಜಯೇಶ್ ಪೂಜಾರಿಯನ್ನು ಕೋರ್ಟ್ ಗೆ ಕರೆತರಲಾಗಿತ್ತು. ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೂ ಹಣದ ಬೇಡಿಕೆ ಇಟ್ಟು ಜೈಲಿನಿಂದ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net