ಕಾಸರಗೋಡು: ಉಪ್ಪಳದಲ್ಲಿ ಅಂಗಡಿಗೆ ನುಗ್ಗಿ ವ್ಯಾಪಾರಿಗೆ ಹಲ್ಲೆ ನಡೆಸಿದ ವಿದ್ಯಾನಗರ ಮುಟ್ಟತ್ತೋಡಿ ನಿವಾಸಿಗಳಾದ ಶಫೀಕ್, ಸಾದಿಕ್, ಶಮೀಂಶಹದಾಬ್ ಎಂಬವರ ವಿರುದ್ಧ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ವಿದ್ಯಾನಗರ ಉಳಿಯ ಪಟ್ಲ ನಿವಾಸಿ ಉಪ್ಪಳದಲ್ಲಿ ವ್ಯಾಪಾರಿಯಾಗಿರುವ ಸವಾದ್ ಎಂಬುವ ತಂಡ ಬುಧವಾರ ಸಂಜೆ ಅಂಗಡಿಗೆ ನುಗ್ಗಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.