ಜಮೀನು ಸರ್ವೇ ವಿಚಾರಕ್ಕೆ ಹಲ್ಲೆ

arrest
Published on

ಹಾವೇರಿ: ಜಮೀನಿಗೆ ರಸ್ತೆ ನಿರ್ಮಿಸಲು ಸರ್ವೇ ವಿಚಾರದಲ್ಲಿ ಗಲಾಟೆ ಉಂಟಾಗಿ ವೃದ್ಧರೊಬ್ಬರ ತಲೆಗೆ ಕಂದ್ಲಿಯಿಂದ ಹಲ್ಲೆ ನಡೆಸಿ, ಗಾಯಪಡಿಸಿದ ಘಟನೆ ನಗರದ ಎಂಜಿ ರಸ್ತೆಯ ಗಣಪತಿ ದೇವಸ್ಥಾನದ ಬಳಿ ಮಂಗಳವಾರ ನಡೆದಿದೆ.

ನಗರದ ಗುಡಿಸಲಗೇರಿ ಓಣಿ ನಿವಾಸಿ ಉಳಿವೆಪ್ಪ ಚನ್ನಪ್ಪ ಅಕ್ಕಿ (78) ಗಾಯಗೊಂಡವರು. ಬಸವರಾಜ ಅಕ್ಕಿ ಹಲ್ಲೆ ನಡೆಸಿದ ಆರೋಪಿ.

ತಾಲೂಕಿನ ತೋಟದ ಯಲ್ಲಾಪುರ ಬಳಿ ಇರುವ ಜಮೀನಿಗೆ ರಸ್ತೆ ನಿರ್ಮಿಸುವ ಸಲುವಾಗಿ ಇಬ್ಬರ ನಡುವೆ ಜಗಳ ಏರ್ಪಟ್ಟಿತ್ತು. ಇದೇ ದ್ವೇಷದಿಂದ ದೇವಸ್ಥಾನಕ್ಕೆ ಕೈಮುಗಿಯಲು ಬಂದಿದ್ದ ಉಳಿವೆಪ್ಪನ ತಲೆ ಹಾಗೂ ಮೈಗೆ ಬಸವರಾಜ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಉಳಿವೆಪ್ಪನನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿ, ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net