ಇಸ್ಪೀಟ್​, ಮಟ್ಕಾ ಜೂಜಾಟ ಅಡ್ಡೆ ಮೇಲೆ ದಾಳಿ

Drone Camera Photography & Videography Training: Application Invited
Drone Camera Photography & Videography Training: Application Invited
Published on

ಮುದ್ದೇಬಿಹಾಳ: ತಾಲೂಕಿನ ಕೆಸಾಪುರ ಗ್ರಾಮ ಮತ್ತು ನಾಲತವಾಡ ಪಟ್ಟಣದ ಎರಡು ಕಡೆ ಇಸ್ಪೇಟ್​, ಓಸಿ ಜೂಜಾಟ ಆಡುತ್ತಿದ್ದವರ ಮೇಲೆ ಪೊಲೀಸರು ಪ್ರತ್ಯೇಕ ದಾಳಿ ನಡೆಸಿ ಒಂದು ಪ್ರಕರಣದಲ್ಲಿ 6, ಇನ್ನೆರಡು ಪ್ರಕರಣದಲ್ಲಿ ತಲಾ ಒಬ್ಬರು ಸೇರಿ 8 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅವರಿಂದ ಒಟ್ಟು 39350 ರೂ. ನಗದು, ಅಪರಾಧಕ್ಕೆ ಬಳಸಿದ ಸಾಮಗ್ರಿ ವಶಪಡಿಸಿಕೊಂಡಿರುವ ಟನೆ ಬುಧವಾರ ಸಂಜೆ ನಡೆದಿದೆ.

ಕೆಸಾಪೂರ ಗ್ರಾಮದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್​ ಅಂದರ್​ ಬಾಹರ್​ ಜೂಜಾಟ ನಿರತರ ಮೇಲೆ ದಾಳಿ ನಡೆಸಿ ಕೆಸಾಪೂರದ ಹಣಮಂತ ಮಾದರ, ಮಂಜು ಚಲವಾದಿ, ಭೂಪಣ್ಣ ವಡ್ಡರ, ಬಸವರಾಜ ಭೋವೇರ, ನಾಲತವಾಡದ ಪವಾಡೆಪ್ಪ ಕಸಬೇಗೌಡರ, ಜೈನಾಪೂರದ ಬೀರಪ್ಪ ದಿಂಡವಾರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅವರಿಂದ 38550 ರೂ. ನಗದು, ನಾಲತವಾಡ ಪಟ್ಟಣದ ವೀರೇಶ್ವರ ಸರ್ಕಲ್​ನ ಸಾರ್ವಜನಿಕ ಸ್ಥಳದಲ್ಲಿ 1 ರೂ.ಗೆ 80 ರೂ. ಕೊಡುವ ಕರಾರಿನ ಮೇರೆಗೆ ಓಸಿ ಮಟ್ಕಾ ನಡೆಸುತ್ತಿದ್ದ ಶಕೀಲ ಸುಗಂಧಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನಿಂದ 230 ರೂ. ನಗದು, ಬಸ್​ ನಿಲ್ದಾಣದ ಎದುರು ಓಸಿ ಮಟಕಾ ಜೂಜಾಟ ನಡೆಸುತ್ತಿದ್ದ ಹಣಮಂತ ಬೇವಿನಮಟ್ಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನಿಂದ 570 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಕೇಸಾಪುರ, ನಾಲತವಾಡದ ವೀರೇಶ್ವರ ಸರ್ಕಲ್​ನ ಪ್ರಕರಣದಲ್ಲಿ ಪಿಎಸೈ ಸಂಜಯ್​ ತಿಪ್ಪರಡ್ಡಿ, ಬಸ್​ ನಿಲ್ದಾಣ ಎದುರಿಗಿನ ಪ್ರಕರಣದಲ್ಲಿ ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ ನೀಡಿದ ದೂರಿನ ಮೇರೆಗೆ ಮುದ್ದೇಬಿಹಾಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net