

ಹೂವಿನಹಡಗಲಿ: ತಾಲೂಕಿನ ಬ್ಯಾಲಹುಣಸಿ ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ಕಬ್ಬಿಣದ ತೆಪ್ಪಗಳ ಮೂಲಕ ನದಿಯ ಆಳಕ್ಕೆ ಇಳಿದು ಮರಳನ್ನು ತುಂಬಿಕೊAಡು ಅಕ್ರಮವಾಗಿ ಸಾಗಿಸುತ್ತಿರುವವರ ಮೇಲೆ ಸೋಮವಾರ ಹಿರೇಹಡಗಲಿ ಪೊಲೀಸರು ದಾಳಿಮಾಡಿ ನಾಲ್ಕು ಕಬ್ಬಿಣದ ತೆಪ್ಪಗಳನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಬ್ಯಾಲಹುಣಸಿ ಗ್ರಾಮದ ಬಳಿ ಹರಿಯುತ್ತಿರುವ ನದಿಯಲ್ಲಿ ಕೊಪ್ಪರಿಗೆ ರೀತಿಯಲ್ಲಿರುವ ನಾಲ್ಕು ಕಬ್ಬಿಣದ ತೆಪ್ಪಗಳಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಬಂದ ಮಾಹಿತಿಯ ಆಧಾರದ ಹಿನ್ನಲೆಯಲ್ಲಿ ಡಿವೈಎಸ್‌ಪಿ ಮಹಾಂತೇಶ್.ಕೆ, ಹಾಗೂ ಸಿಪಿಐ ಸುದೀರ್‌ಕುಮಾರ್ ಬೆಂಕಿ ಅವರ ಮಾರ್ಗದರ್ಶದ ಹಿರೇಹಡಗಲಿ ಪಿಎಸ್‌ಐ ಮಾರುತಿ ಎಸ್.ವಿ ಹಾಗೂ ಸಿಬ್ಬಂದಿಗಳಿದ್ದ ತಂಡ ಸೋಮವಾರÀ ದಾಳಿ ಮಾಡಿ ನಾಲ್ಕು ಕಬ್ಬಿಣದ ತೆಪ್ಪಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಬರುವ ಸೂಚನೆ ಸಿಕ್ಕ ಕೂಡಲೇ ಅಕ್ರಮ ಮರಳು ದಂದೆಕೋರರು ವಿಜಯನಗರ ಜಿಲ್ಲಾ ವ್ಯಾಪ್ತಿಯ ನದಿ ಭಾಗದಲ್ಲಿಯೇ ತೆಪ್ಪವನ್ನು ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಸ್ಥಳಿಯರ ಸಹಾಯ ಪಡೆದು ನದಿಯ ದಡಕ್ಕೆ ತೆಪ್ಪಗಳನ್ನು ತಂದು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ಮಾಡಿದ ತಂಡದಲ್ಲಿ ಹಿರೇಹಡಗಲಿ ಪೊಲೀಸ್ ಠಾಣಾ ಪಿಎಸ್‌ಐ ಮಾರುತಿ ಎಸ್.ವಿ, ಮುಖ್ಯಪೇದೆ ವಿಜಯನಾಯ್ಕ,ಸಿಬ್ಬಂದಿಗಳಾದ ವಿಜಯನಾಯ್ಕ, ರಂಗನಾಥ, ಅಶೋಕ, ಕೊಟ್ರೇಶ್, ಆನಂದ ಇತರರಿದ್ದರು.