

ಬೆಲಹೊಂಗಲ: ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ವಕೀಲರ ಸಂದ ಸದಸ್ಯರು ಉಗ್ರರಿಗೆ ಕಠಿಣ ಕ್ರಮ ಆಗಬೇಕು. ದೇಶದ ಭದ್ರತೆಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ ಅವರಿಗೆ ಮನವಿ ಸಲ್ಲಿಸಿದರು.
ವಕೀಲರ ಸಂದ ಅಧ್ಯ ಎಂ.ಆರ್. ಮೇಳವಂಕಿ, ಹಿರಿಯ ವಕೀಲ ಜೆ.ಕೆ. ರೀರ, ಆರ್.ಎ. ಪಾಟೀಲ, ಸಿ.ಎಸ್.ಚಿಕ್ಕನಗೌಡರ ಮಾತನಾಡಿ, ಪ್ರವಾಸಿಗರ ಮೇಲೆ ಉಗ್ರರು ಧರ್ಮ, ಜಾತಿ ಕೇಳಿ ಹಿಂದುಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿರುವುದು ತೀವ್ರ ಖಂಡನೀಯ. ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ ಏಕತೆಗೆ ಉಗ್ರರು ತೀವ್ರ ಸವಾಲು ಒಡ್ಡುತ್ತಿರುವುದು ಕಳವಳಕಾರಿಯಾಗಿದೆ. ಕೇಂದ್ರ ಸರ್ಕಾರವು ಉಗ್ರರ ವಿರುದ್ಧ ಕಠಿಣ ಕ್ರಮ ಕೆಗೊಂಡು ತಕ್ಕ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಮಡಿದವರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂದ ಉಪಾಧ್ಯ ಎ.ಎಂ. ಸಿದ್ರಾಮನಿ, ಪ್ರಧಾನ ಕಾರ್ಯದರ್ಶಿ ವಿ.ಜಿ. ಕಟದಾಳ, ಡಿ.ಆರ್. ಜೋಶಿ, ಬಿ.ಬಿ. .ವೆಂಕನ್ನವರ, ಬಿ.ಎಸ್. ಪಾಟೀಲ, ಎಸ್.ಎಸ್. ಪತ್ತಾರ, ಅನಿಲ ಕರಬನ್ನವರ್, ಎಸ್.ಪಿ. ಗದಗ, ಎನ್.ಕೆ. ಮೆಳಿಕೇರಿ, , ಶಿವಾನಂದ ಬೆಳಗಾವಿ, ಸುಮಾ ಬಡಿಗೇರ, ಎಸ್.ವೈ. ಪಾಟೀಲ, ರಾಜು ಬೊಳಶೆಟ್ಟಿ, ಯು.ಸಿ. ಹಿರೇಮಠ, ಎಸ್.ಎಸ್. ಆಲದಕಟ್ಟಿ, ರಾಜು ರುದ್ರಾಪೂರ, ಸಿದ್ದಲಿಂಗ ಬೊಳಶೆಟ್ಡಿ, ಶಂಕರ ಕರೀಕಟ್ಟಿ, ಪ್ರೇಮಾ ಬಡಿಗೇರ ಇತರರಿದ್ದರು.