ಹಿಂದೂ ಧಾರ್ಮಿಕ ವಿಚಾರದ ಮೇಲೆ ಆಕ್ರಮಣ

12-ramdas
Published on

ರಾಯಚೂರು: ಹುಲಿ ಉಗುರಿನ ಲಾಕೇಟ್ ವಿಚಾರವನ್ನಿಟ್ಟುಕೊಂಡು ಹಿಂದೂ ಧಾರ್ಮಿಕ ವಿಚಾರಗಳ ಮೇಲೆ ಆಕ್ರಮಣ ನಡೆಸುವ ಕಾರ್ಯವನ್ನು ನಡೆಸಲಾಗುತ್ತಿದ್ದು, ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುವುದು ಸರಿಯಲ್ಲ ಎಂದು ಮಾಜಿ ಸಚಿವ ರಾಮದಾಸ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಈ ಹಿಂದೆ ದೇವಸ್ಥಾನಗಳ ದಾಳಿ ನಡೆಸಲಾಗಿತ್ತು. ಹಿಂದೂ ಧರ್ಮ ಎಷ್ಟೋ ಆಕ್ರಮಣಗಳು ನಡೆದರು ಶಾಶ್ವತವಾಗಿ ಉಳಿಯುವಂತಹ ವ್ಯವಸ್ಥೆ ಹೊಂದಿದ್ದು, ನಾವು ವಿಶ್ವ ಕುಟುಂಬದ ವ್ಯವಸ್ಥೆ ಇಟ್ಟುಕೊಂಡು ಹೋಗುತ್ತಿದ್ದೇವೆ ಎಂದರು.
ಕಾಂಗ್ರೆಸ್‌ನಲ್ಲಿ ಕುರ್ಚಿಗಾಗಿ ಗುದ್ದಾಟ ನಡೆಸುತ್ತಿದ್ದಾರೆ. ನಾವೆಲ್ಲ ರಾಜಕೀಯಕ್ಕೆ ತತ್ತ್ವ, ಸಿದ್ಧಾಂತ ಇಟ್ಟುಕೊಂಡು ರಾಜಕೀಯಕ್ಕೆ ಬಂದವರು. ಆದರೆ ಇತ್ತೀಚಿನ ಬೆಳವಣಿಗೆ ನೋಡಿದೆರೆ ಅಸಹ್ಯ ಹುಟ್ಟಿಸುತ್ತಿದ್ದು, ಮನಸ್ಸಿಗೂ ನೋವಾಗುತ್ತಿದೆ.
ರಾಮನಗರವನ್ನು ಬೆಂಗಳೂರಿಗೆ ಸೇರ್ಪಡೆ ವಿಚಾರಕ್ಕೆ ಒಂದೊಂದು ಪಕ್ಷದವರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಸಾಧಕ, ಬಾಧಕರಗಳು ಏನಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಬದುಕುಗಳನ್ನು ಜೋಡಿಸುವಂತಹ ಕೆಲಸ ಮಾಡಬೇಕಾಗಿದೆ ಎಂದು ರಾಮದಾಸ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net