ಗ್ರಾಪಂ ಮಾಜಿ ಅಧ್ಯಕ್ಷರ ಹತ್ಯೆ ಯತ್ನ

attempt
Published on

ಮಂಗಳೂರು: ತಾಲೂಕು ಪಂಚಾಯಿತಿ ಮಾಜಿ ಸದಸ್ಯ, ಉಳಾಯಿಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯುಸ್ೂ(48) ಎಂಬುವರ ಮೇಲೆ ಸೋಮವಾರ ರಾತ್ರಿ ತಲವಾರು ದಾಳಿ ನಡೆದಿದೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೆಪ್ಪಿನಮೊಗರುವಿನಲ್ಲಿ ಇರುವ ತಮ್ಮ ಸಂಬಂಧಿಕರ ಮನೆಯಿಂದ ಯುಸ್ೂ ಕಾರಿನಲ್ಲಿ ತೆರಳುತ್ತಿದ್ದಾಗ ಕುಲಶೇಖರ ಕೊಗ್ಗರ ಹೊಟೇಲ್ ಬಳಿ ಬೈಕೊಂದು ಡಿಕ್ಕಿಯಾಗಿದೆ. ತಕ್ಷಣ ಯೂಸ್ು ಕಾರು ನಿಲ್ಲಿಸಿ ಪ್ರಶ್ನಿಸಿದಾಗ ಬೈಕ್ ಸವಾರ ಕ್ಷಮೆ ಕೇಳಿದ್ದ. ಅಷ್ಟರಲ್ಲಿ ಬಿಳಿ ಬಣ್ಣದ ಕಾರೊಂದು ಬಂದು ಅಡ್ಡ ನಿಂತಿದ್ದು, ಸುಮಾರು ನಾಲ್ಕು ಮಂದಿಯ ತಂಡ ತಲವಾರಿನಿಂದ ಹಲ್ಲೆ ನಡೆಸಿದೆ. ಯೂಸ್ು ಕೂಗಿಕೊಂಡಾಗ ಕೂಡಲೇ ಬೈಕ್ ಸವಾರ ಸಹಿತ ಎಲ್ಲರೂ ಕಾರಿನಲ್ಲಿ ಪರಾರಿಯಾಗಿದ್ದಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net