ರಾಣೆಬೆನ್ನೂರಲ್ಲಿ ಜೂಜು ಅಡ್ಡೆ ಮೇಲೆ ದಾಳಿ

25 IPL Betting 1
Published on

ಹಾವೇರಿ: ರಾಣೆಬೆನ್ನೂರ ನಗರದ ಕೆಇಬಿ ಕಚೇರಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಸೋಮವಾರ ರಾತ್ರಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಗೌಳೇರ ಓಣಿ ನಿವಾಸಿ ಸಂತೋಷ ಮಲ್ಲಪ್ಪ ಚೌಟಗಿ ಎಂಬಾತನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿತನಿಂದ 2 ಲಕ್ಷ ರೂ. ನಗದು, ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

ದಾಳಿ ವೇಳೆ ಇತರ ಆರೋಪಿತರಾದ ರಘು ಹುಣಸಿಕಟ್ಟಿ, ಮಯೂರ ಭಂಡಾರಿ, ವೀರೇಶ ಹೆದ್ದೇಲಿ ಹಾಗೂ ಅಜಯ ಜಂಬಗಿ ಪರಾರಿಯಾಗಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ ತಂಡಗಳ ನಡುವಿನ ಪಂದ್ಯದ ಮೇಲೆ ಆರೋಪಿತರು ಬೆಟ್ಟಿಂಗ್ ಆಡುತ್ತಿದ್ದರು. ಸಂಘಟಿತ ತಂಡ ರಚಿಸಿಕೊಂಡು ಜನರಿಂದ ಹಣ ಕಟ್ಟಿಸಿಕೊಂಡು ಜೂಜಾಡುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಸಿಇಎನ್ ಠಾಣೆ ಇನ್‌ಸ್ಪೆಕ್ಟರ್ ಶಿವಶಂಕರ ಗಣಾಚಾರಿ, ಪಿಎಸ್‌ಐಗಳಾದ ಎಂ.ಎಫ್. ದುರ್ಗಪ್ಪನವರ, ಸುಜಾತಾ ಪಾಟೀಲ, ಭಾರತಿ ಕುರಿ ಹಾಗೂ ಸಿಬ್ಬಂದಿ ದಾಳಿ ನಡೆಸಿದೆ. ನಾಪತ್ತೆಯಾದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net