

ಬದಿಯಡ್ಕ: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ವಾಹನದ ಮೇಲೆ ನ.3ರಂದು ನಡೆದ ಆಕ್ರಮಣ ಕುರಿತು ಶಿವಳ್ಳಿ ಬ್ರಾಹ್ಮಣ ಸಮಾಜದ ಸದಸ್ಯರ ಸಂಘಟನೆ ಕಾಸರಗೋಡು ಶಿವಳ್ಳಿ ಬ್ರಾಹ್ಮಣ ಸಭೆ ವತಿಯಿಂದ ಬುಧವಾರ ಎಡನೀರು ಮಠದಲ್ಲಿ ಸ್ವಾಮಿಗಳನ್ನು ಭೇಟಿ ಮಾಡಿ, ಖಂಡನಾ ನಿರ್ಣಯ ಕೈಗೊಂಡು ಮಠದ ಆಡಳಿತಾಧಿಕಾರಿಗೆ ಒಪ್ಪಿಸಲಾಯಿತು. ಸಮಾಜದ ಸದಾ ಬೆಂಬಲ ನೀಡುವ ಹೇಳಿಕೆಯನ್ನು ಉಲ್ಲೇಖಿಸಲಾಯಿತು.
ಸಂಘದ ಅಧ್ಯಕ್ಷ ಮಂಜುನಾಥ ಟಿ.ಕೆ., ಪ್ರಧಾನ ಕಾರ್ಯದರ್ಶಿ ಚೇತನರಾಮ ನೂರಿತ್ತಾಯ, ಖಜಾಂಚಿ ಸೀಮಾ ಬಳ್ಳುಳ್ಳಾಯ, ಯುಎಂಬಿಎಸ್ ಮಹಿಳಾ ಉಪಾಧ್ಯಕ್ಷೆ ವೀಣಾ ಕಡಮಣ್ಣಾಯ, ಮಹಿಳಾ ಅಧ್ಯಕ್ಷೆ ಸಂಧ್ಯಾ ಕೆದಿಲಾಯ, ಉದ್ಯಮಿ ವಸಂತ ಭಟ್, ಶ್ರೀನಿವಾಸ ಅಮ್ಮಣ್ಣಾಯ, ಮಠದ ಪ್ರಧಾನ ಪುರೋಹಿತ ಚಕ್ರಪಾಣಿ ದೇವಪೂಜಿತ್ತಾಯ ಸಹಿತ ಸದಸ್ಯರು ಭಾಗವಹಿಸಿದ್ದರು. ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯರು ಉಪಸ್ಥಿತರಿದ್ದರು.