

ಹೊನ್ನಾವರ: ಪಟ್ಟಣದ ಮಾಸ್ತಿಕಟ್ಟೆಯಿಂದ ವೆಂಕಟ್ರಮಣ ದೇವಸ್ಥಾನಕ್ಕೆ ಹೋಗುವ ರಥಬೀದಿಯ ಕಟ್ಟಡದಲ್ಲಿ ನಡೆಸಲಾಗುತ್ತಿದ್ದ ಕ್ಲಬ್ ಮೇಲೆ ಪೊಲೀಸರು ದಾಳಿ ನಡೆಸಿ ಎಂಟು ಜನರನ್ನು ಬಂಧಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಶ್ರೀಪಾದ ವಾಸುದೇವ ಜನ್ನು ಅವರಿಗೆ ಸೇರಿದ ಕಟ್ಟಡದಲ್ಲಿ ಕ್ಲಬ್ ನಡೆಸಲಾಗುತ್ತಿತ್ತು. ಪ್ರದೀಪ ನಾಗಪ್ಪ ಶೆಟ್ಟಿ, ನಾಗಪ್ಪ ಗೋವಿಂದ ಪಟಗಾರ ಹೊದಿಕೆ ಶಿರೂರ, ಶ್ರೀಪಾದ ವಾಸುದೇವ ಜನ್ನು, ಅಣ್ಣಪ್ಪ ಸುಕ್ರು ಹರಿಕಂತ್ರ ಹೊಸಹಿತ್ತಲ ಮಂಕಿ, ಬಸವರಾಜ ಕಲ್ಲಪ್ಪ ಹುಬ್ಬಳ್ಳಿ, ಭಾಸ್ಕರ ದತ್ತಾ ನಾಯ್ಕ ಮಂಕಿ ಚಿತ್ತಾರ, ವಿನಯಕುಮಾರ ನಾಗೇಶ ಶೆಟ್ಟಿ ಬೈಂದೂರು, ಕೃಷ್ಣ ನಾರಾಯಣ ನಾಯ್ಕ ಹಂದಿಗೋಣ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ದಾಳಿ ವೇಳೆ ಜೂಜಾಟಕ್ಕೆ ಬಳಸಿದ ಪರಿಕರ, ಮೊಬೈಲ್, ಮೂರು ಬೈಕ್ ಹಾಗೂ 36,560 ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಮಾರ್ಗದರ್ಶನದಲ್ಲಿ ಭಟ್ಕಳ ಡಿವೈಎಸ್ಪಿ ಮಹೇಶ ನೇತೃದಲ್ಲಿ ಸಿಪಿಐ ತಿಮ್ಮಪ್ಪ ನಾಯ್ಕ ಹಾಗೂ ಹೊನ್ನಾವರ ಪಿಎಸ್‌ಐ ಮಹಾಂತೇಶ ತಂಡದವರು ದಾಳಿ ನಡೆಸಿದ್ದಾರೆ.