ಚಿತ್ತಾಪುರದಲ್ಲಿ ಛಲವಾದಿ ಕಾರಿಗೆ ಬಣ್ಣ ಎರಚಿ ಆಕ್ರೋಶ: ಮುಖಂಡರ ಮೇಲೆ ಹಲ್ಲೆಗೆ ಯತ್ನ

IMG-20250521-WA0355 (1)
Published on

ಕಲಬುರಗಿ: ಸಚಿವ ಪ್ರಿಯಾಂಕ್​ ಖರ್ಗೆ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದು, ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಚಿತ್ತಾಪುರ ಪಟ್ಟಣದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಷಾದ ವ್ಯಕ್ತಪಡಿಸಿ ಹೊರಬಂದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಘೇರಾವ್​ ಹಾಕುವ ಜತೆಗೆ ಕಾರಿನ ಮೇಲೆ ಬಣ್ಣ ಎರಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರ ಮೇಲೆ ಹಲ್ಲೆಗೆ ಯತ್ನ: ಚಿತ್ತಾಪುರದ ಪ್ರವಾಸಿ ಮಂದಿರದಲ್ಲಿ ಛಲವಾದಿ ನಾರಾಯಣಸ್ವಾಮಿ ಅವರನ್ನು ಕೂಡಿ ಹಾಕಿ 5 ಗಂಟೆಯ ಬಳಿಕ ಹೊರ ಬಿಡಲಾಯಿತು. ಬಳಿಕ ಸ್ಥಳದಲ್ಲಿದ್ದ ಬಿಜೆಪಿ ಎಸ್​ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವಾ ಅಷ್ಟಗಿ, ಕಾರ್ಯಕಾರಿ ಸದಸ್ಯ ಪ್ರೀತಮ್​ ಪಾಟೀಲ್​, ಕಾರ್ಯಕರ್ತ ನಿಜಗುಣ ಯಲಗೋಡ ಅವರ ಮೇಲೆ ಹಲ್ಲೆಗೆ ಕಾಂಗ್ರೆಸ್​ ಕಾರ್ಯಕರ್ತರು ಹಲ್ಲೆ ಮುಂದಾದರು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ತಡೆದು, ಮೂವರನ್ನು ತಹಸಿಲ್​ ಕಚೇರಿಗೆ ಕರೆದೊಯ್ದರು. ತಡರಾತ್ರಿಯಾದರೂ ಕಚೇರಿಯಲ್ಲಿಯೇ ಕೂರಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net