

ಕಾಸರಗೋಡು: ಕೆಲಸಮಾಡಿದ ಹಣದಲ್ಲಿ ಬಾಕಿ ಮೊತ್ತ ಕೇಳಿದ ಯುವಕನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಗೋಳಿಯಡ್ಕ ನಿವಾಸಿ ಸಕೀರ್ ಎಂಬಾತನ ವಿರುದ್ಧ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನೀರ್ಚಾಲು ಶಾಂತಿಪಳ್ಳ ನಿವಾಸಿ ವಸಂತ ಕುಮಾರ್ ಅವರ ದೂರಿನ ಮೇರೆಗೆ ಈ ಕೇಸು.
ಪಕ್ಷಿ ಗೂಡು ನಿರ್ಮಿಸಿಕೊಟ್ಟ ಮೊತ್ತದಲ್ಲಿ ನೀಡಲು ಬಾಕಿಯಿದ್ದ 35ಸಾವಿರ ರೂ. ವಾಪಾಸುಕೇಳಿದ್ದಕ್ಕಾಗಿ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ವಸಂತ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.