ಸವಣೂರು ಕಾಡು ಹಂದಿ ದಾಳಿಗೆ ಓರ್ವ ಗಂಭೀರ

Published on

ಪುತ್ತೂರು: ಕಾಡು ಹಂದಿ ದಾಳಿಯಿಂದ ಸವಣೂರು ನಿವಾಸಿಯೊಬ್ಬರು ಗಾಯಗೊಂಡು ಪುತ್ತೂರು ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಡಬ ಸವಣೂರು ರತ್ನಾಕರ (63) ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಹಂದಿ ದಾಳಿಯಿಂದ ಕೈಗೆ ಗಾಯವಾಗಿದ್ದು, ತಕ್ಷಣ ಪುತ್ತೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚುನಾವಣೆಯ ನೆಪದಲ್ಲಿ ರೈತರ ಕೋವಿಗಳನ್ನು ಠೇವಣಿ ಇರಿಸಿಕೊಂಡಿದ್ದು, ಈಗ ಹಂದಿ ದಾಳಿ ಮಾಡಿದೆ. ಈ ಬಗ್ಗೆ ರೈತ ಸಂಘ ಪ್ರಶ್ನೆ ಮಾಡುವ ಸಂದರ್ಭ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ. ರೈತರಿಗೆ ಜಿಲ್ಲೆಯಲ್ಲಿ ರಕ್ಷಣೆಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net