ಬುಡಕಟ್ಟುಗಳ ಮೇಲೆ ದೌರ್ಜನ್ಯ ಎಸುಗುವುದು ಅಪರಾಧ

Untitled-2
ಹೊಸಕೋಟೆ ತಾಲೂಕಿನ ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಫೂರ್ತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಬೀದಿ ನಾಟಕದಲ್ಲಿ ಪ್ರಾಚಾರ್ಯ ಮೋಹನ್​ಕುಮಾರ್​, ಸಂಯೋಜಕ ವೆಂಕಟೇಶ್​, ಸಮಾಜ ಕಲ್ಯಾಣ ಇಲಾಖೆಯ ರಾಮೇಗೌಡ ಇತರರು ಇದ್ದರು.
Published on

ಸೂಲಿಬೆಲೆ : ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಮೇಲೆ ದೌರ್ಜನ್ಯ ಎಸುಗುವುದು ಕಾನೂನು ಸ್ವರೂಪದ ಅಪರಾಧವಾಗುತ್ತದೆ ಈ ಬಗ್ಗೆ ಸಾರ್ವಜನಿಕವಾಗಿ ಎಚ್ಚರವಹಿಸಬೇಕು ಎಂದು ಸ್ಫೂರ್ತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಸ್ಥೆಯ ಸಂಯೋಜಕ ವೆಂಕಟೇಶ್​ ಹೇಳಿದರು.

ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ ಹಾಗೂ ಜಿಪಂ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಬೀದಿ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅನುಸೂಚಿತ ಜಾತಿಯ ಬುಡಕಟ್ಟಿನ ಜನಾಂಗದ ಸ್ವಾದಿನದಲ್ಲಿರುವ ಭೂಮಿಯನ್ನು ಬೆದರಿಕೆಯಿಂದ ಪಡೆಯುವುದು ಹಕ್ಕುಗಳನ್ನು ಕಸಿದುಕೊಳ್ಳುವುದು ಮತಧಾನ ಹಕ್ಕು ಬೆದರಿಕೆಯಿಂದ ಪಡೆಯುವುದು ಧಾರ್ಮಿಕ ಕೇಂದ್ರಗಳ ಪ್ರವೇಶಕ್ಕೆ ನಿಷೇದ ಎರುವುದು, ಕಿರುಕುಳ ನೀಡುವುದು, ಅವಹೇಳನ ಮಾಡುವುದು ಅಪರಾಧವಾಗಿದ್ದು, ಇದರಿಂದ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದರು.

ಕಾಲೇಜು ಪ್ರಾಚಾರ್ಯ ಮೋಹನ್​ಕುಮಾರ್​ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಿಂದ ಬೀದಿ ನಾಟಕ ಮೂಲಕ ಸಮುದಾಯದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದು, ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ಪೂರ್ಣಪ್ರಮಾಣದಲ್ಲಿ ಸಹಕಾರಿ. ಅನುಸೂಚಿತ ವರ್ಗಗಳ ವ್ಯಕ್ತಿಗಳಿಗೆ ಯಾವುದೇ ಹಿಂಸೆ ಕಿರುಕುಳ ದೌರ್ಜನ್ಯ ಎಸುಗಿದರೆ ಸುಳ್ಳುಸಾಕ್ಷ$್ಯಗಳನ್ನು ಸೃಷ್ಟಿ ಮಾಡಿ ಕಿರುಕುಳ ಮೋಸ ಮಾಡುವುದು ಅಪರಾಧ ಇದಕ್ಕೆ 7ವರ್ಷಗಳ ಶಿಕ್ಷೆಯಾಗುತ್ತದೆ. ಈ ಬಗ್ಗೆ ಜಾಗೃತರಾಗಿ ಸಾರ್ವಜನಿಕವಾಗಿ ಸಾಮಾರಸ್ಯ ಜೀವನ ನೆಡಸಲು ಅನುವಾಗುವಂತೆ ಜೀವಿಸಬೇಕು ಎಂದು ಸಲಹೆ ನೀಡಿದರು. ಸ್ಪೂರ್ತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಸ್ಥೆಯ ತಂಡದಿಂದ ಬೀದಿ ನಾಟಕ ಜಾಗೃತಿ ಪ್ರದರ್ಶಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net