

ಜಗದೀಶ ಹೊಂಬಳಿ ಬೆಳಗಾವಿ ಇಷ್ಟು ದಿನ ಪ್ಲಾಸ್ಟಿಕ್ ಬಳಕೆ ಮಾಡಬೇಡಿ, ಅದು ಪರಿಸರಕ್ಕೆ ಮಾರಕ ಎಂದು ಪಾಲಿಕೆ ಜಾಗೃತಿ ಮೂಡಿಸಿದರೂ ಜನರು ಮಾತ್ರ ಪರ್ಯಾಯ ಮಾರ್ಗವಿಲ್ಲದೇ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ. ಇದೀಗ ಜನರಿಗೆ ಸುಲಭವಾಗಿ ಬಟ್ಟೆ ಬ್ಯಾಗ್ ದೊರೆಯಬೇಕು ಎಂಬ ಉದ್ದೇಶದಿಂದ ಎಟಿಎಂ ಯಂತ್ರದ ಮಾದರಿಯಲ್ಲೇ ಬೆಳಗಾವಿ ನಗರದಲ್ಲಿ ಕ್ಲಾಥ್ ವೆಂಡಿಂಗ್ ಮಷಿನ್‌ಗಳನ್ನು ಅಳವಡಿಸಿ, ಯಂತ್ರಗಳಿಂದ ಬಟ್ಟೆ ಬ್ಯಾಗ್ ದೊರೆಯುವಂತೆ ಮಾಡುವುದಕ್ಕೆ ಯೋಜನೆ ರೂಪಿಸಿದ್ದು, ಶೀಘ್ರ ಕಾರ್ಯರೂಪಕ್ಕೆ ಬರಲಿದೆ.
ಜನನಿಬಿಡ ಪ್ರದೇಶಗಳಲ್ಲಿ ಪಾಲಿಕೆ ಕ್ಲಾಪ್ ವೆಂಡಿಂಗ್ ಮಷಿನ್ ಅಳವಡಿಸಲು ಉದ್ದೇಶಿಸಲಾಗಿದೆ. ಒಂದೊಂದು ಮಷಿನ್‌ನಲ್ಲಿ 500 ಬಟ್ಟೆ ಬ್ಯಾಗ್ ಹಾಕಿ ಸಂಗ್ರಹಿಸಿಡಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ 10 ಮಹಿನ್ ಬೆಲೆಗೆ ಸಣ್ಣ ಮತ್ತು ದೊಡ್ಡ ಬ್ಯಾಗ್ ಮಷಿನ್ ನಲ್ಲಿ ಸಂಗ್ರಹಿ ಇಡಲಾಗುವುದು. ಸಾರ್ವಜನಿಕರು ಇನ್ನುಂದೆ ಎಟಿಎಂ ಕಾರ್ಡ್ ಹಾಕಿ ಹೇಗೆ ಹಣ ಪಡೆಯುತ್ತಾರೆಯೋ ಅದೇ ರೀತಿ ಕ್ಲಾಥ್ ವೆಂಡಿಂಗ್ ಮಷಿನ್‌ನಿಂದಲೂ ಸಾರ್ವಜನಿಕರು ಬಟ್ಟೆ ಬ್ಯಾಗ್ ಪಡೆಯಬಹುದು. ಮಷಿನ್ ಗಳ ಮೇಲೆ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ನಿಷೇಧಿಸಿ ಪರಿಸರ ಕಾಪಾಡಿ ಎನ್ನುವ ಘೋಷವಾಕ್ಯ ಬರೆದು ಅರಿವು ಮೂಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವ-ಸಹಾಯ ಗುಂಪುಗಳಿಂದ ನಿರ್ವಹಣೆ:
ಕ್ಲಾಥ್ ವೆಂಡಿಂಗ್ ಮಷಿನ್‌ಗಳನ್ನು ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಸ್ವ-ಸಹಾಯ ಗುಂಪುಗಳಿಗೆ ಹಸಲಾಗುತ್ತಿದೆ. ಮಷಿನ್‌ನಲ್ಲಿ ಬಟ್ಟೆ ಬ್ಯಾಗ್ಗಳನ್ನು ಸಂಗ್ರಹಿಸುವ ಹಾಗೂ ಮಷಿನ್ ಕೆಟ್ಟರೆ, ದುರಸ್ತಿಗೊಳಿಸುವ ಹೊಣೆಗಾರಿಕೆ ವಹಿಸಲು ಚಿಂತಿಸಲಾಗಿದೆ. ಪ್ರತಿಯೊಂದು ಕ್ಲಾಥ್ ವೆಂಡಿಂಗ್ ಮಷಿನ್ ನಿರ್ವಹಣೆಯನ್ನು ಒಂದೊಂದು ಸ್ವ-ಸಹಾಯ ಸಂಘಗಳಿಗೆ ವಹಿಸಿ ಯೋಜನೆ ಯಶಸ್ವಿಗೊಳಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೇಪರ್ ಚೀಲ ತಯಾರಿಕೆ ಯೋಜನೆ ನನೆಗುದಿಗೆ:
ಮೂರು ವರ್ಷಗಳ ಹಿಂದೆ ಕೆ.ಎಚ್. ಜಗದೀಶ ಅವರು ಮಹಾನಗರ ಪಾಲಿಕೆರಾಗಿದ್ದಾಗ 'ದೀನ್ ದಯಾಳ್ ಅಂತ್ಯೋದಯ ಯೋಜನೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಪಾಲಿಕೆಯಲ್ಲಿ ನೋಂದಾಯಿತ ಸ್ವ-ಸಹಾಯ ಸಂಘ, ಪ್ರದೇಶ ಮತ್ತು ನಗರ ವ್ಯಾಪ್ತಿಯ ಒಕ್ಕೂಟಗಳ ಸದಸ್ಯರಿಂದ ಪೇಪರ್ ಬ್ಯಾಗ್ ತಯಾರಿಸುವುದಕ್ಕೆ ವ್ಯವಸ್ಥೆ ಮಾಡಿದ್ದರು. ನಗರದ ಅಂಗಡಿ, ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳ ಬದಲಾಗಿ ಪೇಪರ್ ಬ್ಯಾಗ್ ನೀಡುವುದು ಇದರ ಉದ್ದೇಶವಾಗಿತ್ತು. ಯಡಿಯೂರಪ್ಪ ಮಾರ್ಗದ ಹಳೇ ಬೆಳಗಾವಿ ನಾಕಾ ಪ್ರದೇಶದಲ್ಲಿ ಪೇಪರ್ ಬ್ಯಾಗ್ ತಯಾರಿಸುವುದಕ್ಕೆ ಕೇಂದ್ರ ತೆರೆಯಲಾಗಿತ್ತು. ನಂತರ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ಯೋಜನೆ ಸಾಕಾರವಾಗಲಿಲ್ಲ. ಆ ಯೋಜನೆಯನ್ನೇ ಇತರ ಅಧಿಕಾರಿಗಳು ಮರೆತುಬಿಟ್ಟರು. ಪರಿಸರ ಪೂರಕ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು ಎನ್ನುವುದು ಜನರ ಕಳಕಳಿಯಾಗಿವೆ