

ಚಿತ್ರದುರ್ಗ: ನಮ್ಮ ಆಧ್ಯಾತ್ಮಿಕ ಪ್ರಗತಿಗೆ ಸವತ್ವಭಾವವು ದಾರಿದೀಪವಾಗಿದೆ ಎಂದು ಥಿಯಸಾಫಿಕಲ್ ಫೆಡರೇಷನ್‌ನ ಅಂತಾರಾಷ್ಟ್ರೀಯ ಉಪನ್ಯಾಸಕ ಯು.ಎಸ್.ಪಾಂಡೆ ಹೇಳಿದರು.
ನಗರದ ಉಮಾಪತಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ಥಿಯಸಾಫಿಕಲ್ ಫೆಡರೇಷನ್‌ನ 114 ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಆತ್ಮ ಮತ್ತು ರೂಪ ಪರಮಾತ್ಮನ ಎರಡು ಮುಖಗಳು. ಏಕತೆ ಕಾಣುವುದೇ ಆಧ್ಯಾತ್ಮ ಎಂದು ಹೇಳಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಥಿಯಸಾಫಿಕಲ್ ಸೊಸೈಟಿ ಅಧ್ಯಕ್ಷ ಎಂ.ಗಂಗಾಧರಪ್ಪ, ವಾರಣಸಿಯ ಥಿಯಸಾಫಿಕಲ್ ಸೊಸೈಟಿಯ ಇಂಡಿಯನ್ ಸೆಕ್ಷನ್‌ನ ಅಧ್ಯಕ್ಷ ಪ್ರದೀಪ್ ಗೋಹಿಲ್ ಮಾತನಾಡಿದರು.
ಕಾರ್ಯದರ್ಶಿ ಕೆ.ಜಿ.ಚಂದ್ರಶೇಖರಶಾಸ್ತ್ರಿ, ಮಧ್ಯವಲಯ ವ್ಯವಸ್ಥಾಪಕ ಬಿ.ಕೆ.ನಾಗರಾಜು, ಸನತ್‌ಕುಮಾರ, ಬಿ.ವಿ.ತಿಪ್ಪೇಸ್ವಾಮಿ, ಎಂ.ಎಸ್.ಶ್ರೀಧರ, ಪಾರ್ವತಿ, ಒ.ಚಿತ್ತಯ್ಯ, ತಿಪ್ಪೇಸ್ವಾಮಿ, ಮಹಾಲಿಂಗಪ್ಪ ಇದ್ದರು.
ಕರ್ನಾಟಕ ಥಿಯಸಾಫಿಕಲ್ ಫೆಡರೇಷನ್, ಚಿತ್ರದುರ್ಗ ಥಿಯಸಾಫಿಕಲ್ ಸೊಸೈಟಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.