ಸ್ವದೇಶಿ ವಸ್ತು ಬಳಕೆಗೆ ಹೆಚ್ಚಿನ ಮಹತ್ವ: ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತ್‌ಕುಮಾರ್ ಹೇಳಿಕೆ

Atma Nirbhar Bharat Sankalpa Abhiyana Mandya
oppo_0
Published on

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಭಾರತ ಸ್ವಾವಲಂಬಿ ಮತ್ತು ಸದೃಢ ರಾಷ್ಟ್ರವಾಗಲೂ ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಿಸಲಾಗುತ್ತಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತ್‌ಕುಮಾರ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ನಗರ ಘಟಕದಿಂದ ಆಯೋಜಿಸಿದ್ದ ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನದಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಭಾರತ ಆರ್ಥಿಕವಾಗಿ ಹಾಗೂ ಪ್ರಬಲವಾಗಿ ಬೆಳೆಯುತ್ತಿದೆ. ಸ್ವದೇಶಿ ವಸ್ತುಗಳ ಬಳಕೆ ಮತ್ತು ವ್ಯಾಪಾರಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ವಿದೇಶಿ ವಸ್ತುಗಳ ಆಮದು ಮತ್ತು ಖರೀದಿಗೆ ಹೆಚ್ಚು ಆಸಕ್ತಿ ತೋರುವುದಿಲ್ಲ ಎಂದು ತಿಳಿಸಿದರು.

ಐವತ್ತು ವರ್ಷ ಭಾರತವನ್ನು ಆಳಿದ ಕಾಂಗ್ರೆಸ್ ಸರ್ಕಾರ ವಿದೇಶಿ ವಸ್ತುಗಳ ಆಮದು ಮಾಡಿಕೊಂಡು ದೇಶದ ರೂಪಾಯಿ ಮೌಲ್ಯವನ್ನು ಕುಸಿತದಲ್ಲಿ ಇರುವಂತೆ ಮಾಡಿತ್ತು. ತಂತ್ರಜ್ಞಾನ, ಆಹಾರ ಉತ್ಪಾದನೆ, ನ್ಯಾಯದಾನ ವ್ಯವಸ್ಥೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಅನೇಕ ಸುಧಾರಣೆ ತರಲಾಗಿದ್ದು, ಇದಕ್ಕೆ ಆತ್ಮನಿರ್ಭರ ಸಾಕಾರವಾಗಿದೆ. ಜನರಲ್ಲಿ ಜಾಗೃತಿ ಮೂಡಿಸಿ ಸದೃಢ ರಾಷ್ಟ್ರ ಕಟ್ಟಲು ಪ್ರೇರಣೆಯಾಗಬೇಕಿದೆ. ಭಾರತ ಪ್ರಪಂಚದಲ್ಲೇ ನಾಲ್ಕನೇ ಅತಿ ದೊಡ್ಡ ಆರ್ಥಿಕ ದೇಶವಾಗಿ ಬೆಳೆಯುತ್ತಿದೆ. 2014ರಲ್ಲಿ ಕೇವಲ 25.5 ಕೋಟಿ ಅಂತರ್ಜಾಲ ಸಂಪರ್ಕವಿದ್ದು, ಈಗ 97 ಕೋಟಿಗೆ ಏರಿಕೆಯಾಗಿದೆ. 2.14 ಲಕ್ಷ ಗ್ರಾಮ ಪಂಚಾಯಿತಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸಿ ಆಧುನಿಕತೆ ಸ್ಪರ್ಶ ಕಲ್ಪಿಸಲಾಗಿದೆ ಎಂದರು.

ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ, ಎಂ.ಬಿ.ರಮೇಶ್, ವಿವೇಕ್, ಪ್ರಸನ್ನ, ಕ್ರಾಂತಿ ಮಂಜು, ಅಂಕರಾಜು, ಭೀಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net