ಕಲಬುರಗಿಯಲ್ಲಿ ಎಟಿಎಂ ಒಡೆದು 18 ಲಕ್ಷ ರೂ.ಕಳ್ಳತನ

IMG-20250409-WA0025
Published on

ಕಲಬುರಗಿ: ನಗರದಲ್ಲಿ ಎಸ್ ಬಿಐ ಎಟಿಎಂನ್ನು ಗ್ಯಾಸ್ ನಿಂದ ಕಟರ್ ನಿಂದ ಕಟ್ ಮಾಡಿ 18 ಲಕ್ಷ ರೂಪಾಯಿಯನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ.

ನಗರದ ರಾಮನಗರದ ಬಳಿಯಿರುವ ಎಸ್ ಬಿ ಐ ಎಟಿಎಂನಲ್ಲಿ ಗ್ಯಾಸ್ ಕಟರ್ ನಿಂದ ಎಟಿಎಂ ಒಡೆದು, ಎಟಿಎಂನಲ್ಲಿದ್ದ ಹಣವನ್ನ ದೋಚಿಕೊಂಡು ಪರಾರಿಯಾಗಿದ್ದಾರೆ.

ಎಟಿಎಂನಲ್ಲಿದ್ದ 18,34,100 ರೂಪಾಯಿ ಕದ್ದೋಯ್ದಿದ್ದಾರೆ. ಎಟಿಎಂನಲ್ಲಿದ್ದ ಸಿಸಿಟಿವಿ ಬ್ಲಾಕ್ ಸ್ಪ್ರೇ ಮಾಡಿ ಎಟಿಎಂ ಮುರಿದಿದ್ದಾರೆ.

ನಸುಕಿನ ಜಾವ ಮೂರು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಏ.8ರಂದು ಸಂಜೆ ಆರು ಗಂಟೆಗೆ ಬ್ಯಾಂಕ್ ಸಿಬ್ಬಂದಿ ಹಣ ಹಾಕಿದ್ದರು.

ನಸುಕಿನ ಜಾವ ನಾಲ್ಕು ಗಂಟೆಗೆ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್ ಇಲ್ಲದನ್ನ ಗಮನಿಸಿ ಕಳ್ಳರು ಕೈ ಚಳಕ ತೋರಿಸಿದ್ದಾರೆ.

ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net