ಚಿಮ್ಮನಚೋಡದ ಎಟಿಎಂನಲ್ಲಿ 9ಲಕ್ಷ ದೋಚಿದ ಕಳ್ಳರು

IMG-20240320-WA0011
Published on

ಚಿಂಚೋಳಿ: ತಾಲೂಕಿನ ಚಿಮ್ಮನಚೋಡ ಗ್ರಾಮದ ಪಿ.ಕೆ.ಜಿ.ಬಿ ಬ್ಯಾಂಕ್ ಬಳಿಯ ಎ.ಟಿ.ಎಂ.ಗೆ ಕನ್ನಡ ಹಾಕಿದ ಘಟನೆ ಮಂಗಳವಾರ ರಾತ್ರಿ ಜರುಗಿದೆ.

ಮಂಗಳವಾರ ರಾತ್ರಿ ಎ.ಟಿ.ಎಂ ಒಡೆದು ಅವರಲ್ಲಿದ್ದ ಸುಮಾರು 9ಲಕ್ಷ ರೂ. ಕಳ್ಳತನಗೈದಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಡಿ.ಎಸ್ಪಿ ಸಂಗಮನಾಥ ಹಿರೇಮಠ, ಸಿಪಿಐ ಎಚ್.ಎಲ್.ಗೌಂಡಿ, ಪಿಎಸ್ಐ ಸಿದ್ದೇಶ್ವರ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು, ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದ್ದು, ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಶೋಧ ಕಾರ್ಯ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net