ರಾತ್ರೋ ರಾತ್ರಿ ಎಟಿಎಂ ದರೋಡೆ

atm
Published on

ಮುಳಬಾಗಿಲು: ತಾಲೂಕಿನ ರಾಷ್ಟ್ರೀಯ ಹೆದ್ದಾರಿ -75ರ ಮುಳಬಾಗಿಲು&ಕೋಲಾರ ರಸ್ತೆಯಲ್ಲಿರುವ ಕಾಂತರಾಜ ಸರ್ಕಲ್​ನಲ್ಲಿ ಅಳವಡಿಸಿದ್ದ ಇಂಡಿಯಾ 1 ಎಟಿಎಂ ಯಂತ್ರವನ್ನೇ ಹೊತ್ತೊಯ್ದ ಖದೀಮರು ಅನತಿ ದೂರದಲ್ಲಿ ಎಟಿಎಂ ಹೊಡೆದು ಅದರಲ್ಲಿದ್ದ 3.90 ಲಕ್ಷ ರೂ. ಹಣ ಎಗರಿಸಿ ಪರಾರಿಯಾಗಿದ್ದಾರೆ.

ರಾತ್ರಿಯೇ ಮಾಹಿತಿ ತಿಳಿದ ಮುಳಬಾಗಿಲು ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದು, 500 ರೂ. ನೋಟುಗಳುಳ್ಳ ಬಾಕ್ಸ್​ಅನ್ನು ಹಾಗೇ ಬಿಟ್ಟಿದ್ದು, ಎಟಿಎಂ ಸಂಸ್ಥೆ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net