ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನ ಒಬ್ಬನ ಬಂಧನ

ATM robbery security guard tremendous duty
Published on

ಕಾರವಾರ: ಎಟಿಎಂ ಒಳಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿ ಇನ್ನೊಂದು ಎಟಿಎಂನ ಸೆಕ್ಯುರಿಟಿ ಗಾರ್ಡ್ ಸಮಯ ಪ್ರಜ್ಞೆಯಿಂದ ಬಂಧಿತನಾಗಿದ್ದಾನೆ.
ನಗರದ ಅಂಬೇಡ್ಕರ್ ಸರ್ಕಲ್ ಬಿಎಸ್ ಎನ್ಎಲ್ ಕಟ್ಟಡದಲ್ಲಿರುವ ಇಂಡಿಯನ್ ಬ್ಯಾಂಕ್ ಎಟಿಎಂ ನಲ್ಲಿ ಬೆಳಗ್ಗೆ 4.30 ರ ಸುಮಾರಿಗೆ ನುಗ್ಗಿದ ಕಳ್ಳ ಕಳ್ಳತನಕ್ಕೆ ಯತ್ನಿಸಿದ ಕುಡಲೇ ಸೈರನ್ ಬಾರಿಸಲು ಶುರುವಾಗಿದೆ. ಎಟಿಎಂ ಡೋರ್ ಇದ್ದಕ್ಕಿದ್ದಂತೆ ಲಾಕ್ ಆಗಿದೆ. ಕಳ್ಳ ಒಳಗೆ ಸಿಕ್ಕಿಹಾಕಿಕೊಂಡಿದ್ದ.
ಕೂಗಳತೆ ದೂರದಲ್ಲಿದ್ದ ಎಸ್ ಬಿಐ ಎಟಿಎಂ ಸೆಕ್ಯೂರಿಟಿ ಸುನೀಲ ತಕ್ಷಣ ಶಹರ ಠಾಣೆಗೆ ಮಾಹಿತಿ ನೀಡಿದ್ದಾನೆ.
ಶಹರ ಠಾಣೆ‌ ಪೊಲೀಸರು ಓಡಿ ಬಂದು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿಯ ಇನ್ನಷ್ಟು ವಿವರ ತಿಳಿದು ಬರಬೇಕಿದೆ.
ಎಟಿಎಂನಿಂದ ಯಾವುದೇ ಹಣ ಕಳ್ಳತನವಾಗಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net