

ಬೆಂಗಳೂರು : ಎಟಿಎಂ ಬೂತ್‌ಗೆ ತುಂಬ ಬೇಕಿದ್ದ 54.29 ಲಕ್ಷ ರೂ. ಜತೆ ಕಸ್ಟೋಡಿಯನ್ ಪರಾರಿ ಆಗಿದ್ದಾನೆ. ಬ್ರಿಕ್ಸ್ ಇಂಡಿಯಾ ಪ್ರೈ.ಲಿ. ಕಂಪನಿ ಅಧಿಕಾರಿ ರಮೇಶ್ ಬಾಬು ಎಂಬುವರು ದೂರು ನೀಡಿದ್ದಾರೆ. ಇದರ ಅನ್ವಯ ಕಸ್ಟೋಡಿಯನ್ ಮಣಿ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಶೋಕನಗರ ಪೊಲೀಸರು ತಿಳಿಸಿದ್ದಾರೆ.
ಬ್ರಿಕ್ಸ್ ಇಂಡಿಯಾ ಪ್ರೈ.ಲಿ. ಕಂಪನಿಯೂ ಐಸಿಐಸಿಐ ಬ್ಯಾಂಕ್, ಎಚ್‌ಡಿಎ್ಸಿ ಮತ್ತು ಇಂಡಸ್ ಇಂಡ್ ಬ್ಯಾಂಕ್ ಎಟಿಎಂ ಬೂತ್‌ಗಳಿಗೆ ಹಣ ತುಂಬುವ ಗುತ್ತಿಗೆ ಪಡೆಯಲಾಗಿದೆ. ಈ ಕಂಪನಿಯಲ್ಲಿ ಕಸ್ಟೋಡಿಯನ್ ಆಗಿ ಮಣಿ ಕೆಲಸ ಮಾಡುತ್ತಿದ್ದ. ನ.2ರ ಬೆಳಗ್ಗೆ 9 ಗಂಟೆಗೆ ಎಂದಿನಂತೆ ಕೆಲಸಕ್ಕೆ ಬಂದ ಮಣಿ, ಎಟಿಎಂಗೆ ಹಣ ತುಂಬುವ ಸಲುವಾಗಿ 54.29 ಲಕ್ಷ ರೂ. ಪಡೆದು ಹೊರಬಂದಿದ್ದಾರೆ. ಸಂಜೆ ಆದರೂ ವಾಪಸ್ ಬಂದಿಲ್ಲ. ಮೊಬೈಲ್‌ಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ಎಟಿಎಂ ಬೂತ್‌ಗಳನ್ನು ಪರಿಶೀಲನೆ ನಡೆಸಿದಾಗ ಯಾವುದಕ್ಕೂ ಹಣ ತುಂಬದೆ ಇರುವುದು ಖಚಿತವಾಗಿದೆ.
ಮೋಸ ಮಾಡುವ ಉದ್ದೇಶಕ್ಕೆ ಹಣದೊಂದಿಗೆ ಪರಾರಿ ಆಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ವಿಳಾಸ, ಮೊಬೈಲ್ ನಂಬರ್ ಇನ್ನಿತ್ತರ ಸುಳಿವು ಪಡೆದು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.