ಎಟಿಎಂ ಕಳ್ಳತನಕ್ಕೆ ಯತ್ನಎಟಿಎಂ ಕಳ್ಳತನಕ್ಕೆ ಯತ್ನ

Published on

ಮಾನ್ವಿ: ಪಟ್ಟಣದ ಸಿಂಧನೂರು ರಸ್ತೆಯ ಎಸ್‌ಬಿಐ ಬ್ಯಾಂಕ್ ಎಟಿಎಂ ಕಳ್ಳತನಕ್ಕೆ ಭಾನುವಾರ ರಾತ್ರಿ ಯತ್ನ ಮಾಡಿದ ವೇಳೆ ಆದ ಸೈರನ್ ಸೌಂಡ್‌ಗೆ ಹೆದರಿದ ಕಳ್ಳರು ಪರಾರಿಯಾದ ಘಟನೆ ನಡೆದಿದೆ.

ಎಸ್‌ಬಿಐ ಬ್ಯಾಂಕ್‌ನ ಎಟಿಎಂ ಸೆಂಟರ್ ಕೀಲಿ ಮುರಿದು ಕನ್ನ ಹಾಕಿದ್ದ ಕಳ್ಳರು ಸೈರನ್ ಸೌಂಡ್ ಆಗುತ್ತಿದ್ದಂತೆ ಕಾರಿನಲ್ಲಿ ಪರಾರಿಯಾಗಿದ್ದಾರೆ. ವಿಷಯ ತಿಳಿದ ಪಿಐ ವೀರಭದ್ರಯ್ಯ ಹಿರೇಮಠ ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದರು. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net