

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನವೆಂಬರ್ 4 ರಿಂದ 15 ನೇ ನವೆಂಬರ್ ತನಕ
ಕಲ್ಯಾಣ ನಗರದ ಶ್ರೀಸುರಭಾರತಿ ಸಂಸ್ಕೃತ ಮತ್ತು ಕಲ್ಚರಲ್ ಫೌಂಡೇಷನ್‌ನಲ್ಲಿ ಶ್ರೀ ಸತ್ಯ ಸಾಯಿ ಬಾಬಾರ ಆಶೀರ್ವಾದದೊಂದಿಗೆ ಹೃದಯ ಸ್ಪಂದನ ಸಂಸ್ಥೆ ವತಿಯಿಂದ ಲೋಕಕಲ್ಯಾಣಾರ್ಥ ನಡೆಸಿದ ಅತಿರುದ್ರ ಮಹಾಯಜ್ಞ ೂರ್ಣಾಹುತಿ ಶುಕ್ರವಾರ ಸಂಪನ್ನವಾಯಿತು.
ನ.4ರಿಂದ 15ರವರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರ 11 ಹೋಮ ಕುಂಡಗಳ ಸುತ್ತ 121 ವೇದ ಪಂಡಿತರು ಆಸೀನರಾಗಿ ರುದ್ರ ಜಪದೊಂದಿಗೆ ಅತಿ ರುದ್ರ ಮಹಾಯಜ್ಞ ನಡೆಸಿಕೊಟ್ಟರು. ಇದರ ಅಂಗವಾಗಿ ರುದ್ರ ಸ್ವಾಹಾಕಾರ, ಗೋ-ದಾನ, ಕಳಸ ವಿಸರ್ಜನಮ್ , ಮಾರ್ಜನಮ್, ಮಹಾ ಮಂಗಳಾರತಿ, ವೇದಆಶೀರ್ವಚನಂ ನಡೆಯಿತು.
150 ಕ್ಕೂ ಹೆಚ್ಚು ಋತ್ವಿಜರು ಭಾಗಿ: ಸುರಭಾರತಿ ಸಂಸ್ಕೃತ ಮತ್ತು ಕಲ್ಚರಲ್ ಫೌಂಡೇಷನ್‌ನ ಕೆ.ಎಲ್.ಶ್ರೀನಿವಾಸನ್ ಮಾರ್ಗದರ್ಶನದಲ್ಲಿ ಪಂಡಿತ ಪ್ರಭಾಕರ ಶರ್ಮಾ ಅವರ ನೇತೃತ್ವದಲ್ಲಿ ಹಾಗೂ ಗಂಗಾಧರ ಭಟ್ ಮತ್ತು ವಿಶ್ವನಾಥ ಭಟ್ ಸಹಯೋಗದೊಂದಿಗೆ ಮಹಾಯಜ್ಞ ನಡೆಯಿತು. ದೇಶದ ನಾನಾ ಭಾಗಗಳಿಂದ 150 ಕ್ಕೂ ಹೆಚ್ಚು ಋತ್ವಿಜರು ಮಹಾಯಜ್ಞದಲ್ಲಿ ಪಾಲ್ಗೊಂಡಿದ್ದರು. ಇದರ ಜತೆಗೆ ನಿತ್ಯ ಹೋಮಗಳು, ಶತ ಚಂಡಿಯಾಗ ಮತ್ತು ವೇದ ಪಾರಾಯಣ ಮತ್ತು ಕೃಷ್ಣ ಯಜುರ್ವೇದ ಘನ ಪಾರಾಯಣ ನಡೆದವು . ಈ ಪೂರ್ಣಾಹುತಿಯ ಕಾರ್ಯಕ್ರಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರು ಶ್ರದ್ಧಾ, ಭಕ್ತಿಯೊಂದಿಗೆ ಪಾಲ್ಗೊಂಡು ದೈವಿಕ ಅನುಭೂತಿ ಪಡೆದರು.
ವಿದೇಶಿ ಭಕ್ತರ ಉಪಸ್ಥಿತಿ: ನ.4 ರಿಂದ ಆರಂಭಗೊಂಡಿದ್ದ ಯಜ್ಞದ ಸಂಕಲ್ಪವನ್ನು ಬೆಂಗಳೂರು ಕಗ್ಗದಾಸಪುರದ ಹೃದಯ ಸ್ಪಂದನ ಸಂಸ್ಥೆ ಕೈಗೊಂಡಿತ್ತು. ಪೂರ್ಣಾಹುತಿಯಲ್ಲಿ ಹೃದಯ ಸ್ಪಂದನ ಸಂಸ್ಥೆಯ ಅವಸರಾಳ ಸತ್ಯ ಸಾಯಿ ಪ್ರಸಾದ, ಸಾಯಿರಾ ಹರಿಶಂಕರ, ಪಿ.ಎನ್.ಶ್ರೀನಿವಾಸ, ಜಗದೀಶ ಕೊಟ್ಟೂರಶೆಟ್ಟರ, ಇಟ್ಟಾ ರಘುನಂದನ, ಶ್ರೀನಿವಾಸ ಸುರೇಬಾನ, ಬಚ್ಚು ಸುರೇಶ, ಶೈಲೇಶ, ಎಂ.ವೆಂಕಟೇಶ್ವರಲು, ಪ್ರಭಾಕರ್, ವಿಶ್ವನಾಥ, ಶಿವಕುಮಾರ ಪಾಲ್ಗೊಂಡಿದ್ದರು . ಅಲ್ಲದೇ ಅಮೇರಿಕ, ಮಲೇಶಿಯಾ, ಶ್ರೀೀಲಂಕಾದಿಂದ ಭಕ್ತರು ಆಗಮಿಸಿದ್ದರು.