ಮಾರ್ಚ್ 22ರಿಂದ 31ರ ವರೆಗೆ ‘ಕುಕ್ಕರಹಳ್ಳಿ ಕೆರೆ’ ಚಿತ್ರ ಪ್ರದರ್ಶನ

Published on

ಮೈಸೂರು: ಇಂಡಿಯಾ ಹೆರಿಟೇಜ್ ಸಿಟಿಸ್ ನೆಟ್‌ವರ್ಕ್ ಫೌಂಡೇಷನ್‌ನಿಂದ ಮಾ.22ರಿಂದ 31ರವರಗೆ ವರ್ಣಚಿತ್ರ ಹಾಗೂ ಛಾಯಾಗ್ರಾಹಕ ಕಲಾವಿದ ಸುನೀಲ್‌ರಾಜು ಅವರ ಕುಕ್ಕರಹಳ್ಳಿ ಕೆರೆ ಕುರಿತ ಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ.
ಸರಸ್ವತಿಪುರಂನಲ್ಲಿರುವ ಹೆರಿಟೇಜ್ ಹೌಸ್‌ನಲ್ಲಿ ಪ್ರದರ್ಶನ ಆಯೋಜಿಸಲಾಗಿದ್ದು, ನಿತ್ಯ ಬೆಳಗ್ಗೆ 10.30ರಿಂದ ಸಂಜೆ 7 ಗಂಟೆವರೆಗೆ ಪ್ರದರ್ಶನ ಇರಲಿದೆ ಎಂದು ಕಲಾವಿದ ಸುನೀಲ್‌ರಾಜು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾನು ಛಾಯಾಗ್ರಹಣ ಹಾಗೂ ವರ್ಣಚಿತ್ರ ಕಲಾವಿದನಾಗಿದ್ದು, ಕುಕ್ಕರಹಳ್ಳಿ ಕೆರೆಯೊಡನೆ ಹೊಂದಿರುವ ಭಾವನಾತ್ಮಕ ಸಂಬಂಧ ಕುರಿತಂತೆ ಸೆರೆ ಹಿಡಿದಿರುವ ಕಲಾತ್ಮಕ ಛಾಯಾಚಿತ್ರಗಳನ್ನು ಪ್ರದರ್ಶಿಸುತ್ತಿದ್ದೇನೆ. 21 ಛಾಯಾಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಪ್ರತಿಯೊಂದೂ ತಮ್ಮದೇ ಆದ ವಿಶೇಷತೆ ಹೊಂದಿವೆ. ಗಾಳಿ, ಸೂರ್ಯನ ಬಿಂಬ, ಪಕ್ಷಿ ಮೊದಲಾದವುಗಳೊಡನೆ ಹೊಂದಿರುವ ವ್ಯಕ್ತಿಗತ ಅನುಭವವನ್ನು ಇಲ್ಲಿ ಅನುಭವಿಸಬಹುದಾಗಿದೆ. ಪ್ರವೇಶ ಉಚಿತವಾಗಿರುತ್ತದೆ ಎಂದು ಮಾಹಿತಿ ನೀಡಿದರು. ಕಲಾವಿದ ಗಿರಿ ಶಿಲ್ಪಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net