

ಮಂಗಳೂರು: ಉರ್ವ ಕನ್ನಡ ಮೊಯ್ಲಿ ಸಮಾಜ ಸುಧಾರಕ ಸಂಘ ವತಿಯಿಂದ ಇತ್ತೀಚೆಗೆ ಆಟಿಡೊಂಜಿ ದಿನ ಕಾರ್ಯಕ್ರಮ ಜರಗಿತು.
ಪೊಳಲಿ ಕ್ಷೇತ್ರದ ವಂಶ ಪಾರಂಪರಿಕ ವಾದ್ಯಗಾರ ಪೊಳಲಿ ಚಂದ್ರಶೇಖರ ದೇವಾಡಿಗ ಶುಭ ಹಾರೈಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ವಿಶೇಷ ಮಾಹಿತಿ ನೀಡಿದರು. ಸಭಾಂಗಣದಲ್ಲಿ ಸಿಸಿಟಿವಿ ಉದ್ಘಾಟಿಸಲಾಯಿತು. ಶ್ರೀಕೃಷ್ಣ ವೇಷ ಸ್ಪರ್ಧೆ ಏರ್ಪಡಿಸಲಾಯಿತು. ಕನ್ನಡ ಮೊಯ್ಲಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಭುಜಂಗ ಶ್ರೀಯಾನ್, ಮಹಿಳಾ ಮಂಡಲ ಅಧ್ಯಕ್ಷೆ ಲತಾ ಅನಿಲ್, ಯುವಕ ಸಂಘ ಅಧ್ಯಕ್ಷ ಸುರೇಶ ಕಲ್ಲಾವು, ಉಪಾಧ್ಯಕ್ಷ ಧನಲಕ್ಷ್ಮೀ ಅರುಣ್, ಕೋಶಾಧಿಕಾರಿ ಮಲ್ಲಿಕಾ ಶರತ್, ಜತೆ ಕಾರ್ಯದರ್ಶಿಗಳಾದ ವಸಂತ್ ಅತ್ತಾವರ್, ನಿಕ್ಷೇಪ, ಗೋಪಿನಾಥ, ಅರುಣ್ ಪಚ್ಚನಾಡಿ ಮತ್ತಿತರರು ಉಪಸ್ಥಿತರಿದ್ದರು.
ಅರುಣ್ ಉರ್ವ ಪ್ರಸ್ತಾವನೆಗೈದರು. ನಿತಿನ್ ಹೊಯಿಗೆಬೈಲ್ ವಂದಿಸಿದರು. ಕರುಣಾಕರ ಶ್ರೀಯಾನ್ ಹಾಗೂ ರಜತ್ ಕಾರ್ಯಕ್ರಮ ನಿರೂಪಿಸಿದರು.