ಆಟಿ ಸೊಪ್ಪಿನ ಪಾಯಸ ಸವಿದು ಸಂಭ್ರಮ

IMG-20250804-WA0276
Published on

ಹನಗೋಡು: ನಾಗರಹೊಳೆ ಕಾಡಂಚಿನಲ್ಲಿ ವಾಸಿಸುತ್ತಿರುವ ಕೊಡಗು ಹಾಗೂ ಕೇರಳ ಮೂಲದ ಜನತೆ ಸೋಮವಾರ ಆಟಿ (ಆಷಾಢ)ಯ 18ನೇ ದಿನಕ್ಕೆ 18 ಔಷಧ ಶಕ್ತಿಯ ಆಟಿ ಸೊಪ್ಪಿನ ಪಾಯಸ ಸವಿದು ಸಂಭ್ರಮಿಸಿದರು.

ಹನಗೋಡು ಹೋಬಳಿಯ ಬಿಲ್ಲೇನಹೊಸಹಳ್ಳಿ, ನೇರಳಕುಪ್ಪೆ, ಕಾಳಬೋಚನಹಳ್ಳಿ, ಉಡುವೆಪುರ, ಕಿಕ್ಕೇರಿಕಟ್ಟೆ, ಹೆಬ್ಬನಕುಪ್ಪೆ, ಕಚುವಿನಹಳ್ಳಿ, ಕಡೇಮನುಗನಹಳ್ಳಿ ಸೇರಿದಂತೆ ಇತರ ಗ್ರಾಮಗಳಲ್ಲಿ ಕೇರಳ ಹಾಗೂ ಕೊಡಗು ಮೂಲದ ಜನತೆ ಆಟಿ (ಆಷಾಡ) ತಿಂಗಳಲ್ಲಿ ತಿನ್ನುವ ವಿಶೇಷ ತಿನಿಸುಗಳಲ್ಲಿ ಆಟಿ ಪಾಯಸವೂ ಒಂದಾಗಿದೆ. ಇದು ವೈಜ್ಞಾನಿಕವಾಗಿ ನೋಡಿದರೆ ಆರೋಗ್ಯವರ್ಧಕ ತಿನಿಸಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವುಳ್ಳದ್ದಾಗಿದೆ. ಆಟಿ ಸೊಪ್ಪಲ್ಲಿ 18 ಬಗೆಯ ಔಷಧೀಯ ಗುಣಗಳು ಸೇರಿಕೊಂಡಿರುತ್ತದೆ. ಆದ್ದರಿಂದ ಈ ದಿನ ನಾವು ಆಟಿಪಾಯಸ ಮಾಡಿ ಮನೆ ಮಂದಿಯೆಲ್ಲ ಸೇವಿಸುತ್ತೇವೆ ಎನ್ನುತ್ತಾರೆ ವಿ.ಬಿ.ರವಿಚಂದ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net