

ಉಡುಪಿ: ತುಳುಕೂಟ, ಲಯನ್ಸ್ ಕ್ಲಬ್ ಇಂದ್ರಾಳಿ ಮತ್ತು ರೋಟರಿ ಕ್ಲಬ್ ಉಡುಪಿ ರಾಯಲ್ ಆಶ್ರಯದಲ್ಲಿ ತುಳುನಾಡಿನ ವಿಶೇಷ ಆಚರಣೆ ಅಂಗವಾಗಿ ಸಾರ್ವಜನಿಕರಿಗೆ ಇಂದ್ರಾಳಿ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಜಯಸಿಂಹ ಸಭಾಭವನದಲ್ಲಿ ಜುಲೈ 28ರಂದು ಬೆಳಗ್ಗೆ 7ರಿಂದ 7.45ರವರೆಗೆ ಆಷಾಢ ಅಮಾವಾಸ್ಯೆ ಕಷಾಯ ವಿತರಣೆ ನಡೆಯಲಿದೆ ಎಂದು ಸಂಯೋಜಕ ರತ್ನಾಕರ್ ಇಂದ್ರಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.