

ಶಿರ್ವ: ಶಿರ್ವ ಮಹಿಳಾ ಮಂಡಲ ವತಿಯಿಂದ ಆಟಿ ವೈವಿಧ್ಯ ಕಾರ್ಯಕ್ರಮ ಭಾನುವಾರ ನಡೆಯಿತು. ಆಟಿ ತಿಂಗಳಲ್ಲಿ ನಮ್ಮ ಹಿರಿಯರು ಸೇವಿಸುತ್ತಿದ್ದ ತಿನಿಸು ಹಾಗೂ ಆಚಾರ ವಿಚಾರಗಳ ಬಗ್ಗೆ ಮೂಡುಬಿದಿರೆ ಆಳ್ವಾಸ್ ಮೆಡಿಕಲ್ ಕಾಲೇಜು ಪ್ರಾಧ್ಯಾಪಕಿ ಡಾ.ಗೀತಾ ಮಾರ್ಕಾಂಡೇಯ ಮಾಹಿತಿ ನೀಡಿದರು. ಮಹಿಳಾ ಮಂಡಲ ಅಧ್ಯಕ್ಷೆ ಡಾ.ಸ್ಫೂರ್ತಿ ಪಿ.ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಗುರುಪೂರ್ಣಿಮೆ ಹಿನ್ನೆಲೆಯಲ್ಲಿ ಶಿಕ್ಷಕಿ ಲಿಲ್ಲಿ ನಜರತ್ ಅವರನ್ನು ಗೌರವಿಸಲಾಯಿತು. ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಮಹಿಳಾ ಮಂಡಲ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು.
ಶಿರ್ವ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಟ್ಠಲ್ ಅಂಚನ್, ಮಹಿಳಾ ಮಂಡಲ ಗೌರವ ಸಲಹೆಗಾರ್ತಿ ಗೀತಾ ವಾಗ್ಳೆ, ಉಪಾಧ್ಯಕ್ಷೆ ಗೀತಾ ಮೂಲ್ಯ, ಜತೆ ಕಾರ್ಯದರ್ಶಿ ಗೌರಿ ಶೆಣೈ, ಉಪ ಸಮಿತಿ ಸದಸ್ಯರಾದ ವಿನಯಾ ಕುಂದರ್, ಜ್ಯೋತಿ ಸುಧೀರ್ ಶೆಟ್ಟಿ, ಸುನೀತಾ ಪೂಜಾರಿ, ಶ್ವೇತಾ ಗಿರೀಶ್ ಉಪಸ್ಥಿತರಿದ್ದರು. ಮಹಿಳಾ ಮಂಡಲ ಗೌರವಾಧ್ಯಕ್ಷೆ ಬಬಿತಾ ಜಗದೀಶ್ ಅರಸ ಸ್ವಾಗತಿಸಿದರು. ಜಯಶ್ರೀ ಶೆಟ್ಟಿ ಮಟ್ಟಾರು, ಪುಷ್ಪಾ ಆಚಾರ್ಯ ಪ್ರಾರ್ಥಿಸಿದರು. ಕಾರ್ಯದರ್ಶಿ ಐರಿನ್ ಪಿಂಟೋ ವರದಿ ವಾಚಿಸಿದರು. ವಸಂತಿ ಗೋಪಾಲ್ ವಂದಿಸಿದರು. ಜಯಶ್ರೀ ಜಯಪಾಲ್ ಶೆಟ್ಟಿ, ದೀಪಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.