ಆತ್ಮನಿರ್ಭರವೆನ್ನುವುದು ದೇಶದ ಆ ತ್ಮ

prathap simha
Published on

ಬೆಳ್ತಂಗಡಿ: ದೇಶವನ್ನು, ದೇಶದ ಪರಿಸರವನ್ನು ಪ್ರೀತಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಹೇಳಿದರು.

ಮಂಗಳವಾರ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಮತ್ತು ಶ್ರೀ ಧ.ಮಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯ ವತಿಯಿಂದ ಶಾಂತಿವನ ಪ್ರಕೃತಿ ಚಿಕಿತ್ಸಾಲಯದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಆತ್ಮನಿರ್ಭರ ಎಂಬುದು ದೇಶದ ಆತ್ಮ ಎನ್ನುವ ಭಾವನೆ ಭಾರತೀಯರದ್ದು. ದೇವರನ್ನು ಯಾವ ಹೆಸರಿನಲ್ಲೂ ಕರೆಯಬಹುದು ಆದರೆ ಎಲ್ಲರ ಆತ್ಮ ಭಾರತೀಯರದ್ದು ಎಂದು ಗುರುತಿಸುವಂತೆ ಮಾಡಿದವರು ಪ್ರಧಾನಿ ನರೇಂದ್ರ ಮೋದಿಯವರು. ಅಂತಹ ಭಾವೈಕ್ಯವನ್ನು ನಾವು ಬೆಳೆಸೋಣ ಎಂದರು.

ಚಲನಚಿತ್ರ ನಿರ್ದೇಶಕ, ನಟ ರಘು ಭಟ್, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ, ಶ್ರೀ ಧ.ಮಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯ ಕಾಲೇಜು ಪ್ರಾಂಶುಪಾಲ ಡಾ.ಪ್ರಶಾಂತ್ ಶೆಟ್ಟಿ, ಶ್ರೀ ಧ.ಮಂ ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಶಶಿಕಾಂತ್ ಐ. ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ನಾನು ಜಗತ್ತಿನ ಹಲವಾರು ಕಡೆ ಚಿತ್ರೀಕರಣಕ್ಕಾಗಿ ಹೋಗಿದ್ದೇನೆ. ಅಲ್ಲಿನ ವ್ಯವಸ್ಥೆಗಳು ಮತ್ತು ಟೀಕೆಗಳನ್ನು ವೌನವಾಗಿ ಸ್ವೀಕರಿಸಿದ್ದೇನೆ. ಧರ್ಮಸ್ಥಳ ಶಾಂತಿವನ ಪ್ರಕೃತಿ ಚಿಕಿತ್ಸಾಲಯದಲ್ಲಿ ಕಂಡಂತಹ ನೆಮ್ಮದಿ ಇದುವರೆಗೆ ಕಂಡಿಲ್ಲ. ಇದಕ್ಕೆ ಮಂಜುನಾಥ ಸ್ವಾಮಿಯ ಆಶಿರ್ವಾದವೇ ಕಾರಣ. ರಘು ಭಟ್ ಬೆಂಗಳೂರು ನಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net