

ತಿಪಟೂರು: ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತ ಯೋಜನೆಯಲ್ಲಿ ನೀಡುತ್ತಿರುವ ಬಡ್ಡಿರಹಿತ ಸಾಲ ಸೌಲಭ್ಯ ಆರ್ಥಿಕ ಸಂಕಷ್ಟದಲ್ಲಿದ್ದವರಿಗೆ ಆಸರೆಯಾಗಿದ್ದು, ಹಲವಾರು ವ್ಯಾಪಾರಿಗಳು, ಉದ್ಯಮಿಗಳು ಸದ್ದಿಲ್ಲದೇ ನೆರವು ಪಡೆಯುತ್ತಿದ್ದಾರೆ.
ಮಾರ್ಚ್ 25ರಿಂದ ಸುವಾರು 75 ದಿನಗಳು ಜಾರಿಯಲ್ಲಿದ್ದ ಲಾಕ್‌ಡೌನ್ ಪರಿಣಾಮ, ಇಡೀ ದೇಶದಲ್ಲಿ ವ್ಯಾಪಾರ, ವಹಿವಾಟು ಸ್ಥಗಿತಗೊಂಡು ಉದ್ಯಮ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿತ್ತು. ಲಾಕ್‌ಡೌನ್ ತೆರವಾದ ನಂತರ ವ್ಯಾಪಾರ ಲುಕ್ಸಾನಾದ ಹಿನ್ನೆಲೆಯಲ್ಲಿ ಉದ್ಯಮಿಗಳು ಮತ್ತು ವ್ಯಾಪಾರಸ್ಥರು ಪುನಃ ಬಂಡವಾಳ ಹೊಂದಿಸಿಕೊಂಡು ವಾರುಕಟ್ಟೆ ವಿಸ್ತರಿಸುವುದು ಹೇಗೆಂಬ ಚಿಂತೆಯಲ್ಲಿದ್ದರು.
ಪರಿಸ್ಥಿತಿ ಮನಗಂಡ ಕೇಂದ್ರ ಬೀದಿಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು, ಕ್ಯಾಬ್ ಚಾಲಕರನ್ನು ಗುರುತಿಸಿ ಬಡ್ಡಿ ರಹಿತವಾಗಿ ತಲಾ 10 ಸಾವಿರ ರೂ. ಸಾಲ ಸೌಲಭ್ಯ ಮತ್ತು ಎಲ್ಲರ ಸಾಲದ ಮೇಲಿನ ವಾಸಿಕ ಕಂತುಗಳನ್ನು (ಜೀವ ವಿಮೆ ಸೇರಿ) ಸೆ.30ರವರೆಗೆ ವಿಸ್ತರಿಸಿ, ಕಾರ್ಮಿಕರ ಪಿಎಫ್ ವಂತಿಗೆ ಪಾವತಿ ಕೂಡ ವಿಸ್ತರಣೆ ವಾಡಿತ್ತು. ಇದೆಲ್ಲದರ ಜತೆಗೆ ಟ್ರೇಡ್ ಲೈಸೆನ್ಸ್ ಹಾಗೂ ಜಿಎಸ್‌ಟಿ ನಂಬರ್ ಹೊಂದಿರುವವರ ಹಿತದೃಷ್ಟಿಯಿಂದ ವಿಶೇಷ ಸಾಲ ಸೌಲಭ್ಯದ ನೆರವು ೋಷಿಸಿದೆ.
ಆರ್ಥಿಕ ಪುನಶ್ಚೇತನಕ್ಕೆ ಕೇಂದ್ರ ೋಷಿಸಿದ 20 ಲಕ್ಷ ಕೋಟಿ ರೂಪಾಯಿ ವಿಶೇಷ ಆರ್ಥಿಕ ಪ್ಯಾಕೇಜ್‌ನಲ್ಲಿ ಉದ್ಯಮಿ/ವ್ಯಾಪಾರಿ, ತನ್ನ ವಹಿವಾಟಿಗೆ ಅನುಸಾರ ಬ್ಯಾಂಕುಗಳಿಂದ ಪಡೆಯುತ್ತಿದ್ದ ಸಾಲದ ಜತೆಗೆ ಹೆಚ್ಚುವರಿಯಾಗಿ ಶೇ.20 ಓವರ್ ಡ್ರಾಫ್ಟ್(ಮುಂಗಡ ಸಾಲ) ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಇದಕ್ಕೆ ಮುಂದಿನ 12 ತಿಂಗಳವರೆಗೂ ಅಸಲು ಮತ್ತು ಬಡ್ಡಿ ಎರಡನ್ನೂ ಕಟ್ಟುವಂತಿಲ್ಲ. ಇದು ನಿಜಕ್ಕೂ ಸಂಕಷ್ಟದಲ್ಲಿದ್ದ ವ್ಯಾಪಾರಿಗಳಿಗೆ ಆಸರೆಯಾಗಿದೆ.
ಒಟ್ಟಾರೆ ಮಹಾವಾರಿ ಕರೊನಾ ನಿರ್ಮೂಲನೆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿರುವ ಜತೆಗೆ ದೇಶದ ಪ್ರಜೆಗಳನ್ನೂ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವುದು ಪ್ರಾವಾಣಿಕ ವ್ಯಾಪಾರಿಗಳನ್ನು ಅವಲಂಭಿಸಿದೆ.
ಸಂಕಷ್ಟದ ಸಮಯದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳು ಮತ್ತು ವ್ಯಾಪಾರಸ್ಥರಿಗೆ ಶೇ.20 ಮುಂಗಡ ಸಾಲಸೌಲಭ್ಯವನ್ನು ಸರ್ಕಾರ ಷರತ್ತುರಹಿತವಾಗಿ ನೀಡುತ್ತಿದೆ. ಇದರ ಪ್ರಯೋಜನ ಪಡೆದಿದ್ದು, ಯೋಜನೆಯಿಂದ ಮನೋಸ್ಥೈರ್ಯ ಹೆಚ್ಚಿದೆ. ಟಿ.ಎನ್.ಅರುಣ್ ಕುವಾರ್ ವ್ಯಾಪಾರಿ, ತಿಪಟೂರು