

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಎಂಇಎಸ್ ಕಾಲೇಜಿನ ಸೈಯದ್ ಮತೀನ್ ವೇಗದ ಓಟಗಾರ ಎಂಬ ಹಿರಿಮೆಗೆ ಭಾಜನರಾದರು. ಇದರೊಂದಿಗೆ, 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು.
ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಓವಲ್ ಮೈದಾನದಲ್ಲಿ 2ನೇ ದಿನವಾದ ಶುಕ್ರವಾರ ವಿವಿಧ ಸ್ಪರ್ಧೆಗಳು ನಡೆದವು.
10.90 ಸೆಕೆಂಡ್‌ನಲ್ಲಿ ಜಯದ ಗಡಿ ದಾಟಿದ ಸೈಯದ್ ಸುಲಭವಾಗಿ ಮೊದಲ ಸ್ಥಾನ ಪಡೆದರು. ಸರಸ್ವತಿಪುರಂ ಟಿಟಿಎಲ್ ಕಾಲೇಜಿನ ಪೂರ್ವಿಕ್, ವಿದ್ಯಾವರ್ಧಕ ಕಾಲೇಜಿನ ಡಿ.ಎಸ್.ದರ್ಶನ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗಳಿಸಿದರು.
ಹಾಸನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಿ.ಜೆ.ಕಾವ್ಯಾ 200 ಮೀ. ಓಟದ ಸ್ಪರ್ಧೆಯಲ್ಲೂ ಚಿನ್ನ ಗೆದ್ದರು. ಮಹಿಳೆಯರ 100 ಮೀ. ಓಟದಲ್ಲೂ ಇವರು ಚಿನ್ನದ ಪದಕ ಗಳಿಸಿದ್ದರು. ಉಳಿದಂತೆ, ತಿ.ನರಸೀಪುರ ವಿಜಯಾ ಕಾಲೇಜಿನ ಎಲ್.ಮೋನಿಕಾ, ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ಕೆ.ಹರ್ಷಿತಾ ಅವರು ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದುಕೊಂಡರು.
4*400 ರಿಲೇ ಓಟದಲ್ಲಿ ನಾಗಮಂಗಲದ ಎಸ್‌ಎಸಿ ಕಾಲೇಜು ಪ್ರಥಮ, ಮೈವಿವಿ ಪಿಜಿಎಸ್‌ಸಿ ತಂಡ ದ್ವಿತೀಯ, ಮಹಾರಾಜ ಕಾಲೇಜು ತಂಡ ತೃತೀಯ ಸ್ಥಾನವನ್ನು ಪಡೆಯಿತು.
5,000 ಮೀ. ಓಟದಲ್ಲಿ ಮೈವಿವಿ ಪಿಜಿಎಸ್‌ಸಿ ಪುರುಷೋತ್ತಮ್ ಪ್ರಥಮ, ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನ ಜಿ.ಎಂ.ಭರತ್ ದ್ವಿತೀಯ, ಗುಂಡ್ಲುಪೇಟೆಯ ಜಿಎಸ್‌ಜಿಸಿಯ ಅಭಿಷೇಕ್ ತೃತೀಯ ಸ್ಥಾನ ಪಡೆದರು.
400 ಮೀ. ಹರ್ಡಲ್ಸ್‌ನಲ್ಲಿ ಮೈಸೂರಿನ ವಿದ್ಯಾಶ್ರಮ ಕಾಲೇಜಿನ ರಾಹುಲ್ ನಾಯಕ್ ಪ್ರಥಮ, ಮಹಾಜನ ಕಾಲೇಜಿನ ಉಲ್ಲಾಸ್‌ಗೌಡ ದ್ವಿತೀಯ, ಮೈವಿವಿ ಪಿಜಿಎಸ್‌ಸಿ ನಿಶಾಂತ್ ತೃತೀಯ ಸ್ಥಾನ ಗಳಿಸಿದರು.
20 ಕಿ.ಮೀ ನಡಿಗೆಯಲ್ಲಿ ಸಿದ್ಧಾರ್ಥನಗರದ ಜಿಎಫ್‌ಜಿಸಿಯ ಯಶ್ವಂತ್ ಪ್ರಥಮ, ತಿ.ನರಸೀಪುರ ವಿಜಯ ಕಾಲೇಜಿನ ದೊರೆಸ್ವಾಮಿ ದ್ವಿತೀಯ, ಮಹಾಜನ ಕಾಲೇಜಿನ ಎಚ್.ಎನ್.ಸಂಜಯ್ ತೃತೀಯ ಸ್ಥಾನ.
ಹ್ಯಾಮರ್ ಥ್ರೋ: ವಿಕಾಸ್ ಗೌಡ (ಪಿಜಿಎಸ್‌ಸಿ, ಮಾನಸಗಂಗೋತ್ರಿ) ಪ್ರಥಮ, ಕೆ.ಎಂ.ದರ್ಶನ್ (ಎಸ್‌ಟಿಜಿ ಕಾಲೇಜು, ಚಿನಕುರಳಿ) ದ್ವಿತೀಯ, ಕುಶಾಲ್ ಗೌಡ (ಎಸ್‌ಎಸಿ, ನಾಗಮಂಗಲ) ತೃತೀಯ. ಹೈಜಂಪ್‌ನಲ್ಲಿ ಜಿ.ಕೆ.ಉದಯ್ (ಜಿಎಫ್‌ಜಿಸಿ, ಕೆ.ಆರ್.ನಗರ) ಪ್ರಥಮ, ಸಿ.ಎಚ್.ಪವನ್ (ಮಹಾಜನ ಕಾಲೇಜು) ದ್ವಿತೀಯ, ವೈ.ಗಗನ್ (ಕೆ.ಪುಟ್ಟಸ್ವಾಮಿ ಕಾಲೇಜು) ತೃತೀಯ. ಶಾಟ್‌ಪಟ್‌ನಲ್ಲಿ ವೈ.ಭರತ್ (ಎಚ್‌ಆರ್‌ಐಎಚ್‌ಇ, ಹಾಸನ) ಪ್ರಥಮ, ದೀಕ್ಷಿತ್ (ಶೇಷಾದ್ರಿಪುರಂ ಕಾಲೇಜು) ದ್ವಿತೀಯ, ರೂಪೇಶ (ಎಸ್‌ಎಎಫ್‌ಜಿಸಿ, ಚನ್ನರಾಯಪಟ್ಟಣ) ತೃತೀಯ ಸ್ಥಾನ ಗಳಿಸಿದರು.
110 ಮೀ. ಹರ್ಡಲ್ಸ್‌ನಲ್ಲಿ ಹುಣಸೂರಿನ ದೇವರಾಜ ಅರಸು ಕಾಲೇಜಿನ ಆರ್.ಜಿ.ಚೇತನ್ (ಪ್ರ), ಚನ್ನರಾಯಣಪಟ್ಟಣದ ಎಸ್‌ಎವಿ ಕಾಲೇಜಿನ ಎ.ಪಿ.ರಕ್ಷಿತ್ (ತೃ). ಜಾವೇಲ್ ಥ್ರೋನಲ್ಲಿ ಮಾನಸ ಗಂಗೋತ್ರಿ ಪಿಜಿಎಸ್‌ಸಿ ಎಂ.ಎಸ್.ವಿಕಾಸ್ ಗೌಡ (ಪ್ರ), ವಿದ್ಯಾವರ್ಧಕ ಕಾಲೇಜಿನ ಎಂ.ಎನ್.ನಿತಿನ್ (ದ್ವಿ), ಹಳ್ಳಿಮೈಸೂರು ಕಾಲೇಜಿನ ಎಚ್.ಎಸ್.ಮಂಜುನಾಥ್ (ತೃ) ಬಹುಮಾನಕ್ಕೆ ಭಾಜನರಾಗಿದ್ದಾರೆ.
4*400 ಮೀ.ರಿಲೇ ಓಟದಲ್ಲಿ ಟೆರಿಶಿಯನ್ ಕಾಲೇಜು ಪ್ರಥಮ, ತಿ.ನರಸೀಪುರದ ವಿಜಯಾ ಕಾಲೇಜು ದ್ವಿತೀಯ, ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜು ತೃತೀಯ. 5 ಸಾವಿರ ಮೀ.ಓಟದಲ್ಲಿ ದೀಪಾ (ಜಿಎಫ್‌ಜಿಸಿ, ಸಿದ್ಧಾರ್ಥನಗರ) ಪ್ರಥಮ, ಸಿ.ವಿದ್ಯಾ ದ್ವಿತೀಯ, ಎಂ.ಸಹನಾ (ವಿಜಯಾ ಕಾಲೇಜು, ತಿ.ನರಸೀಪುರ) ತೃತೀಯ.
20 ಕಿ.ಮೀ ನಡಿಗೆಯಲ್ಲಿ ಮೇಘನಾ ಪ್ರಥಮ, ಕುಸುಮಾ (ವಿಜಯಾ ಕಾಲೇಜು, ತಿ.ನರಸೀಪುರ) ದ್ವಿತೀಯ, ಪಿ.ಆರ್.ತ್ರಿಷಾ (ಮಹಾರಾಣಿ ವಾಣಿಜ್ಯ ಕಾಲೇಜು) ತೃತೀಯ. ಟ್ರಿಪಲ್ ಜಂಪ್‌ನಲ್ಲಿ ಲಿನ್ಯಾ ಮೇರಿ (ಜಿಎಫ್‌ಜಿಸಿ, ಸಿದ್ಧಾರ್ಥನಗರ) ಪ್ರಥಮ, ಶ್ರೀರಕ್ಷಾ (ಮಹಾರಾಣಿ ಕಲಾ ಕಾಲೇಜು) ದ್ವಿತೀಯ, ಎಸ್.ಟಿ.ಸಹನಾ (ಜಿಎಫ್‌ಜಿಸಿ, ಪಾಂಡವಪುರ) ತೃತೀಯ.
400 ಮೀ. ಹರ್ಡಲ್ಸ್ ಓಟದಲ್ಲಿ ಸಿ.ಟಿ.ಗಾನವಿ ಪ್ರಥಮ, ಅದಿರಾ (ಟೆರಿಶಿಯನ್ ಕಾಲೇಜು) ದ್ವಿತೀಯ, ಪಲ್ಲವಿ (ಜೆಎಸ್‌ಎಸ್ ಮಹಿಳಾ ಕಾಲೇಜು, ಸರಸ್ವತಿಪುರಂ) ತೃತೀಯ. ಜಾವೆಲಿನ್ ಥ್ರೋದಲ್ಲಿ ದರ್ಶಿನಿ (ಟೆರಿಶಿಯನ್ ಕಾಲೇಜು) ಪ್ರಥಮ, ಡೈನಿ (ವಾಣಿವಿಲಾಸ ಕಾಲೇಜು) ದ್ವಿತೀಯ, ವರ್ಷಿತಾ (ಸರ್ಕಾರಿ ಮಹಿಳಾ ಕಾಲೇಜು, ಹುಣಸೂರು) ತೃತೀಯ.
ಮಹಿಳೆಯರ ವಿಭಾಗದ 800 ಮೀ.ಓಟದಲ್ಲಿ ಮಹಾರಾಜ ಕಾಲೇಜಿನ ಚಿಕ್ಕಮ್ಮ ಪ್ರಥಮ ಸ್ಥಾನಕ್ಕೆ ಭಾಜನರಾದರು. ತಿ.ನರಸೀಪುರದ ವಿಜಯ ಪ್ರಥಮ ದರ್ಜೆ ಕಾಲೇಜಿನ ನಿಸರ್ಗ (ದ್ವಿ), ಟೆರೇಷಿಯನ್ ಕಾಲೇಜಿನ ರಾಧಿಕಾ (ತೃ). 100 ಮೀ. ಹರ್ಡಲ್ಸ್‌ನಲ್ಲಿ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಆರ್.ಅಕ್ಷಿತಾ (ಪ್ರ), ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನ ಎಸ್.ಎ.ಜೀವಿತಾ (ದ್ವಿ), ಟೆರೇಷಿಯನ್ ಕಾಲೇಜಿನ ಎಂ.ಎಸ್.ಮಾನಸಾ (ತೃ).
ಗುಂಡು ಎಸೆತದಲ್ಲಿ ಮಾನಸ ಗಂಗೋತ್ರಿಯ ಪಿಜಿಎಸ್‌ಸಿಯ ಬೃಂದಾ ಎಸ್.ಗೌಡ (ಪ್ರ), ಟೆರೇಷಿಯನ್ ಕಾಲೇಜಿನ ಎಸ್.ಕೆ.ರಯಾ (ದ್ವಿತೀಯ), ಮಂಡ್ಯ ಸರ್ಕಾರಿ ಮಹಿಳಾ ಕಾಲೇಜಿನ ಟಿ.ಜಿ.ಮೇಘನಾ (ತೃ).