ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ಅಗತ್ಯ

Athletes need proper training
ಕ್ರಿಕೆಟ್​ನಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ ವಿಜಯಪುರದ ಹೇಮರಡ್ಡಿ ಮಲ್ಲಮ್ಮ ಸಂಸ್ಥೆಯ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಹಾಸಿಂಪೀರ ವಾಲಿಕಾರ, ಅಶೋಕ ಜಾಧವ, ಚಿದಾನಂದ ನಿಂಬಾಳ ಮತ್ತಿತರರಿದ್ದಾರೆ.
Published on

ವಿಜಯಪುರ: ನಮ್ಮ ವಿಜಯಪುರ ಜಿಲ್ಲೆಯಲ್ಲಿರುವ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ನೀಡಿದ್ದೇ ಆದಲ್ಲಿ ಅವರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದ್ದಾರೆ. ದುರದೃಷ್ಟವಶಾತ್​ ಇಲ್ಲಿನ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ಸಿಗುತ್ತಿಲ್ಲ. ಹೀಗಾಗಿ ಕ್ರೀಡಾ ೇತ್ರ ಸಾಧನೆ ಇಲ್ಲದೇ ಸೊರಗುತ್ತಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ನಗರದ ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಸ್ಥೆಯ ಸಭಾಂಗಣದಲ್ಲಿ ರಾಜ್ಯ ಮತ್ತು ಉತ್ತರ ಕರ್ನಾಟಕ ಟೆನ್ನಿಸ್​ ಬಾಲ್​ ಕ್ರಿಕೆಟ್​ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಲಯನ್ಸ್​ ಕ್ಲಬ್​ ಪರಿವಾರಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಹಿಮಾಚಲ ರಾಜ್ಯದ ಕುಲುಮಿನಲ್ಲಿ ನಡೆದ ರಾಷ್ಟ್ರೀಯ ಟೆನಿಸ್​ ಬಾಲ್​ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದ ಕರ್ನಾಟಕ ರಾಜ್ಯ ತಂಡದ ಮಹಿಳಾ ಆಟಗಾರ್ತಿಯರಿಗೆ, ಉತ್ತರ ಕರ್ನಾಟಕ ಬಾಲಕರ ತಂಡ ಆಟಗಾರರಿಗೆ ಮತ್ತು ತಂಡದ ತರಬೇತಿಗಾರರಿಗೆ ಸೋಮವಾರ ಹಮ್ಮಿಕೊಂಡ ಅಭಿನಂದನ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯ ಟೆನಿಸ್​ ಬಾಲ್​ ಕ್ರಿಕೆಟ್​ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾ. ಅಶೋಕ ಜಾಧವ ಮಾತನಾಡಿ, ಕ್ರೀಡಾಪಟುಗಳು ಶಿಸ್ತು ಬದ್ಧ ತರಬೇತಿ ಜತೆಗೆ ಆತ್ಮ ವಿಶ್ವಾಸದಿಂದ ಮುನ್ನುಗಬೇಕು. ಅಲ್ಲದೆ, ತಮ್ಮ ಕೌಶಲ್ಯಗಳನ್ನು ಸೂಕ್ತ ಸಮಯದಲ್ಲಿ ಪ್ರದರ್ಶನ ಮಾಡುವ ಕ್ಷಮತೆ ಹೊಂದಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು.

ಉತ್ತರ ಕರ್ನಾಟಕ ಟೆನಿಸ್​ ಬಾಲ್​ ಕ್ರಿಕೆಟ್​ ಸಂಸ್ಥೆ ಪ್ರಧಾನ ಕಾರ್ಯದರ್ಶಿ ರವಿ ಚವಾಣ, ಮಾಜಿ ಸೈನಿಕ ಅಧಿಕಾರಿ ಸಂಕೇತ ನಾಯಕ, ವಿಶ್ರಾಂತ ದೈಹಿಕ ನಿರ್ದೇಶಕಿ ವಿದ್ಯಾ ಕೋಟೆನ್ನವರ, ಎಂ.ಎನ್​. ಉಟಗಿ ಮಾತನಾಡಿದರು. ಹಮೀದ ಬೀಳಗಿ, ಶಶಿಕಲಾ ಇಜೇರಿ, ನ್ಯಾಯವಾದಿ ಜಾಫರ ಅಂಗಡಿ, ಚಿದಾನಂದ ನಿಂಬಾಳ ವೇದಿಕೆಯಲ್ಲಿದ್ದರು. ಸಾಧನೆಗೈದ ಆಟಗಾರರಿಗೆ ಮತ್ತು ತರಬೇತುದಾರರಿಗೆ ಸನ್ಮಾನಿಸಿ ಪ್ರಮಾಣ ಪತ್ರ ನೀಡಲಾಯಿತು. ನಾಗೇಶ ಡೋಣೂರ, ಸೋಮಶೇಖರ ರಾಠೋಡ ಪ್ರಾರ್ಥಿಸಿದರು. ಸುರೇಶ ಬಿಜಾಪುರ ನಿರೂಪಿಸಿದರು. ಅಬ್ಬಾಸ ತಡಲಗಿ ವಂದಿಸಿದರು.

ಪ್ರೊ. ಶಿವಕುಮಾರ ಉಕ್ಕಲಿ, ಲತಾ ಪಾಟೀಲ, ಜಿ.ಎಸ್​. ಬಳ್ಳೂರ, ಇಂದುಮತಿ ಕನ್ನೂರ, ಅಪ್ಪು ರಾಠೋಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net