ಕ್ರೀಡಾಪಟುಗಳಿಗೆ ಸ್ಪರ್ಧಾ ಮನೋಭಾವ ಅಗತ್ಯ

16 GVT 01
ಗಂಗಾವತಿ ಬೇತೆಲ್ ಪಿಯು ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಟೆನ್ನಿಸ್‌ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬಾಗಲಕೋಟೆ ಜಿಲ್ಲೆಯ ತಂಡದೊಂದಿಗೆ ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಚ್.ಜಗದೀಶ,ಬೇತೆಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬ್ಲೇಜಿಯಲ್ ಜೋಸ್ೆ ರಾಜು, ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್ ಇತರರಿದ್ದರು.
Published on

ಗಂಗಾವತಿ: ಪಠ್ಯ ಚಟುವಟಿಕೆಗಳ ಜತೆಗೆ ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕಿದ್ದು, ಸ್ಪರ್ಧಾಮನೋಭಾವನೆಯಿಂದ ಕ್ರೀಡಾಪಟುಗಳು ಪಾಲ್ಗೊಳ್ಳಬೇಕಿದೆ ಎಂದು ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಚ್.ಜಗದೀಶ ಸಲಹೆ ನೀಡಿದರು.

ನಗರದ ಬೇತೆಲ್ ಪಿಯು ಕಾಲೇಜು ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ ಪಿಯು ವಿಭಾಗ ಮತ್ತು ಬೇತೆಲ್ ಸ್ವತಂತ್ರ ಪಿಯು ಕಾಲೇಜು ಸಹಯೋಗದೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ಪಿಯು ಕಾಲೇಜುಗಳ ರಾಜ್ಯಮಟ್ಟದ ಟೆನ್ನಿಸ್‌ವಾಲಿಬಾಲ್ ಪಂದ್ಯಾವಳಿಯ ಸಮಾರೋಪದಲ್ಲಿ ಮಾತನಾಡಿದರು. ಟೆನ್ನಿಸ್ ವಾಲಿಬಾಲ್ ಹೊಸ ಕ್ರೀಡೆಯಾಗಿದ್ದು, ಜಿಲ್ಲೆಯಲ್ಲಿ ಮೊದಲ ಬಾರಿ ರಾಜ್ಯಮಟ್ಟದ ಕ್ರೀಡಾಕೂಟ ಅಯೋಜಿಸುವ ಮೂಲಕ ಪರಿಚಯಿಸಲಾಗಿದೆ. ವಿವಿಧ ಜಿಲ್ಲೆಯಿಂದ ಬಂದಿದ್ದ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಬೇತೆಲ್ ಸಮೂಹ ಕೈಗೊಂಡಿತ್ತು ಎಂದರು.

ಎರಡು ದಿನಗಳ ಕ್ರೀಡಾಕೂಟದಲ್ಲಿ ಬಾಲಕರ 27 ತಂಡದ 162 ಕ್ರೀಡಾಪಟುಗಳು ಮತ್ತು ಬಾಲಕಿಯರ 21 ತಂಡದ 126 ಕ್ರೀಡಾಪಟುಗಳು ಭಾಗವಹಿಸಿದ್ದರು. ರಾಜ್ಯದ 30 ಜಿಲ್ಲೆಗಳ 48 ತಂಡ ವ್ಯವಸ್ಥಾಪಕರು, 12 ನಿರ್ಣಾಯಕರು, 13 ದೈಹಿಕ ಶಿಕ್ಷಣ ಉಪನ್ಯಾಸಕರಿದ್ದರು. ಟೆನ್ನಿಸ್‌ವಾಲಿಬಾಲ್ ಹೊಸಬಗೆಯ ಆಟವಾಗಿದ್ದು, ಲಿತಾಂಶವೂ ವಿಭಿನ್ನವಾಗಿತ್ತು. ಮೊದಲ ಬಾರಿಗೆ ಜಿಲ್ಲೆಯಲ್ಲಿ ಪರಿಚಯಿಸಿದ್ದು, ಉತ್ತಮ ಸ್ಪಂದನೆ ದೊರೆಯಿತು.

ಲಿತಾಂಶ: ಬಾಲಕರ ವಿಭಾಗದಲ್ಲಿ ಬಾಗಲಕೋಟೆ (ಪ್ರಥಮ), ರಾಮನಗರ (ದ್ವೀತಿಯ), ಬಾಲಕಿಯರ ವಿಭಾಗದಲ್ಲಿ ಉಡುಪಿ (ಪ್ರಥಮ), ಮಂಗಳೂರು (ದ್ವೀತಿಯ) ಸ್ಥಾನ ಪಡೆಯುವ ಮೂಲಕ ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಜಿ.ಅನಿಲಕುಮಾರ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರಗೌಡ, ಪ್ರಾಚಾರ್ಯರಾದ ಡಾ.ಎನ್.ರವಿಚವ್ಹಾಣ, ಬಸಪ್ಪ ನಾಗೋಲಿ, ಬೇತೆಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬ್ಲೇಜಿಯಲ್ ಜೋಸ್ೆ ರಾಜು, ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್, ಆಡಳಿತಾಧಿಕಾರಿ ಹೇಮಾಸುಧಾಕರ ದಯಾಶೀಲ, ಕ್ರೀಡಾ ಸಂಯೋಜಕ ತಿರುಪತಿನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net