ರೋಟರಿ ವುಡ್ಸ್‌ನಿಂದ ಕ್ರೀಡಾಪಟುಗಳಿಗೆ ಸನ್ಮಾನ

oplus_131074
oplus_131074
Published on

ಮಡಿಕೇರಿ: ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆಯ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಗುರುವಾರ ಮೂವರು ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.


ಹಾಕಿ ಕ್ರೀಡೆಯಲ್ಲಿ ಉದಯೋನ್ಮುಖ ಪ್ರತಿಭೆ ಎಸ್.ಕೆ.ದೇಚಕ್ಕ, ರಾಷ್ಟ್ರಿಯ ಹಾಕಿ ತೀರ್ಪುಗಾರ ಅಯ್ಯಪ್ಪ, ಸೆಸ್ಟೋಬಾಲ್ ಕ್ರೀಡೆಯಲ್ಲಿ ಭಾರತದ ನಾಯಕತ್ವ ವಹಿಸಿದ ಮಹಮ್ಮದ್ ಶಾಹಿಲ್ ಅವರು ಸನ್ಮಾನಕ್ಕೆ ಪಾತ್ರರಾದರು.


ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲ್, ಮಾತನಾಡಿ, ಕ್ರೀಡೆಯಲ್ಲಿ ಸಾಕಷ್ಟು ಸಾಧನೆ ಮಾಡಿದ ಅನೇಕ ಕ್ರೀಡಾಪಟುಗಳು ಜಿಲ್ಲೆಯಲ್ಲಿದ್ದಾರೆ. ಈ ಬಾರಿ ಎಳೆಯ ಪ್ರತಿಭೆಗಳನ್ನು ಹುಡುಕಿ ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ, ಸನ್ಮಾನ ಮಾಡಲಾಗುತ್ತಿದೆ ಎಂದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಕ್ರೀಡಾಪಟುಗಳು ಸನ್ಮಾನ ಖುಷಿ ತಂದಿದೆ. ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ಮಾಡಲು ಇಂತಹ ಕಾರ್ಯಕ್ರಮ ಪ್ರೋತ್ಸಾಹ ನೀಡುತ್ತಿದೆ ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡರು.


ಈ ಸಂದರ್ಭದಲ್ಲಿ ರೋಟರಿ ವುಡ್ಸ್ ಕಾರ್ಯದರ್ಶಿ ಕಿರಣ್ ಕುಂದರ್, ಭಗತ್ ರಾಜ್, ರಂಜಿತ್ ಕಿಗ್ಗಾಲ್, ಪ್ರದೀಪ್ ಕಿಗ್ಗಾಲ್, ಬಾಲಸುಬ್ರಹ್ಮಣ್ಯ, ಲೋಕೇಶ್, ಜಹೀರ್ ಅಹ್ಮದ್, ಪವನ್, ಧನಂಜಯ ಶಾಸ್ತ್ರಿ, ಬೋಪಣ್ಣ, ಪದ್ಮಾಗಿರಿ, ಪ್ರಮಿಳಾಶೆಟ್ಟಿ ರವಿಕುಮಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net