ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದೆ

Athletes have a bright future.
Published on

ವಿಜಯಪುರ : ದಿನದ ಒಂದು ಗಂಟೆಯ ಕ್ರೀಡೆ ವ್ಯಕ್ತಿಯನ್ನು ದಿನವಿಡೀ ಉತ್ಸಾಹದಿಂದ ಇರುವಂತೆ ಮಾಡುತ್ತದೆ. ದೈಹಿಕ ಸದೃಢತೆಗೆ ಕ್ರೀಡೆ ಸ್ಪೂರ್ತಿ ಎಂದು ಬಿಎಲ್​ಡಿಇ ಸಂಸ್ಥೆ ದೈಹಿಕ ಶಿಣ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಮಲ್ಲನಗೌಡ ಕುಪ್ಪಿ ಹೇಳಿದರು.

ನಗರದ ಎ.ಎಸ್​. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ದೈಹಿಕ ಶಿಣ ಮತ್ತು ಕ್ರೀಡಾ ವಿಭಾಗ ಹಾಗೂ ಎನ್​ಎಸ್​ಎಸ್​ ಟಕಗಳ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡ ರಾಷ್ಟ್ರೀಯ ಕ್ರೀಡಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಣದ ಜತೆಗೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿಯೂ ತೊಡಗಿಸಿಕೊಳ್ಳಬೇಕು. ಕ್ರೀಡಾಪಟುಗಳಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳಿವೆ ಎಂದರು.

ಅಧ್ಯತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್​.ಬಿ. ಕಮತಿ ಮಾತನಾಡಿ, ಆರೋಗ್ಯವಂತ ಯುವಕರೇ ಸದೃಢ ಭಾರತದ ಆಸ್ತಿಗಳು. ಕ್ರೀಡೆಯಲ್ಲಿ ಭಾಗವಹಿಸುವುದರ ಜತೆಗೆ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು. ಮೇಜರ್​ ಧ್ಯಾನಚಂದ ಅವರಂತಹ ಶ್ರೇಷ್ಠ ಹಾಕಿ ಆಟಗಾರರನ್ನು ಜಗತ್ತಿಗೆ ಪರಿಚಯಿಸಿರುವ ಕೀರ್ತಿ ಭಾರತಕ್ಕಿದೆ ಎಂದು ತಿಳಿಸಿದರು.

ಎನ್​ಎಸ್​ಎಸ್​ ಅಧಿಕಾರಿ ವಿಜಯಕುಮಾರ ತಳವಾರ ಕ್ರೀಡಾ ಪ್ರತಿೆಯ ವಿಧಿಯನ್ನು ಬೋಧಿಸಿದರು. ದೈಹಿಕ ನಿರ್ದೇಶಕ ಎಸ್​.ಎ. ಪಾಟೀಲ ಪ್ರಾಸ್ತಾವಿಕ ಮಾತುಗಳಾಡಿದರು. ಡಾ. ಮುರುಗೇಶ ಪಟ್ಟಣಶೆಟ್ಟಿ, ವಿನಯ ದರ್ಬಿ ವೇದಿಕೆಯಲ್ಲಿದ್ದರು. ರಸುಲ್​ ಮುಲ್ಲಾ ಪ್ರಾರ್ಥಿಸಿದರು. ಶ್ರೇಯಾ ರೂಡಗಿ ಸ್ವಾಗತಿಸಿದರು. ಜಯಶ್ರೀ ರಣಸಿಂಗ್​ ನಿರೂಪಿಸಿದರು. ಸೌಂದರ್ಯ ಪೂಜಾರಿ ವಂದಿಸಿದರು.

ಉಪನ್ಯಾಸಕರಾದ ರವೀಂದ್ರಗೌಡ, ಹಣಮೇಶ ನಾಯಕ, ಶಿವಾನಂದ ಮಠಪತಿ, ರವಿ ಮನಗೂಳಿ, ಸ್ನೇಹಾ ಬೆನಕಟ್ಟಿ, ನಿವೇದಿತಾ ಬಳೂರಗಿ, ಪಲ್ಲವಿ ಪವಾರ, ಪ್ರದಿಪ ಕುಂಬಾರ ಮತ್ತಿತರರಿದ್ದರು.

ವಿಜಯಪುರದ ಎ.ಎಸ್​. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಕ್ರೀಡಾ ದಿನ ಕಾರ್ಯಕ್ರಮದಲ್ಲಿ ಪ್ರೊ. ಮಲ್ಲನಗೌಡ ಕುಪ್ಪಿ ಮಾತನಾಡಿದರು. ಡಾ. ಎಸ್​.ಬಿ. ಕಮತಿ, ವಿಜಯಕುಮಾರ ತಳವಾರ, ಡಾ. ಮುರುಗೇಶ ಪಟ್ಟಣಶೆಟ್ಟಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net