

ಮಂಗಳೂರು: ಅತ್ತಾವರದ ಅಪಾರ್ಟ್‌ಮೆಂಟ್‌ವೊಂದರ 12 ಮಹಡಿಯಲ್ಲಿದ್ದ ಫ್ಲಾೃಟ್‌ನಲ್ಲಿ ಮಂಗಳವಾರ ಮುಂಜಾನೆ ಹಠಾತ್ತಾಗಿ ಕಾಣಿಸಿಕೊಂಡ ಬೆಂಕಿಯಿಂದ ಮಹಿಳೆಯೊಬ್ಬರು ಉಸಿರುಗಟ್ಟಿ ಮೃತಪಟ್ಟರೆ, ಉಳಿದ 8 ಮಂದಿಯನ್ನು ರಕ್ಷಣೆ ಮಾಡಲಾಗಿದೆ.
ಶಾಹಿನಾ ನುಸ್ಬಾ (24) ಮೃತಪಟ್ಟ ಮಹಿಳೆ.
ಫ್ಲಾೃಟ್‌ನಲ್ಲಿ 9ಮಂದಿ ವಾಸವಾಗಿದ್ದು, ಸೋಮವಾರ ರಾತ್ರಿ ಊಟ ಮಾಡಿ ಮಲಗಿದ್ದರು. ಮಂಗಳವಾರ ಮುಂಜಾನೆ 4ಗಂಟೆ ವೇಳೆಗೆ ಫ್ಲಾೃಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದೆ. ಇದರಿಂದ ಆತಂಕಿತರಾದ 7 ಮಂದಿ ಫ್ಲಾೃಟ್‌ನಿಂದ ಸುರಕ್ಷಿತವಾಗಿ ಹೊರಗೆ ಬಂದಿದ್ದಾರೆ. ಇದೇ ವೇಳೆ ಇಬ್ಬರು ಫ್ಲಾೃಟ್‌ನೊಳಗೆ ಬಾಕಿಯಾಗಿದ್ದು, ಇವರಲ್ಲಿ ಒಬ್ಬರನ್ನು ರಕ್ಷಣೆ ಮಾಡಿದರೆ, ಇನ್ನೊಬ್ಬ ಮಹಿಳೆ ದಟ್ಟ ಹೊಗೆಯಿಂದ ಉಸಿರಿನ ಸಮಸ್ಯೆಯಿಂದ ಚಿಂತಾಜನಕ ಸ್ಥಿತಿಗೆ ತಲುಪಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಬೆಂಕಿ ಅವಘಡದಿಂದ ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ನಷ್ಟವಾಗಿದೆ ಎಂದು ತಿಳಿದು ಬಂದಿದೆ.
ಅಗ್ನಿಶಾಮಕದಳದ ರೀಜಿನಲ್ ೈರ್ ಆಫೀಸರ್ ಆರ್. ರಂಗನಾಥ್, ಪುಂಡಲೀಕ, ರಾಜಾ, ಜಯ, ಎಲುಗುರಪ್ಪ ಮೂಲೆಮನಿ, ಮಲ್ಲಿಕಾರ್ಜುನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.